ADVERTISEMENT

ರಾಯಬಾಗ: ತಾಲ್ಲೂಕು ಆಸ್ಪತ್ರೆಗೆ ಬಂದ ‘ನಗು ಮಗು’ ವಾಹನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:12 IST
Last Updated 26 ಫೆಬ್ರುವರಿ 2026, 5:12 IST
ರಾಯಬಾಗ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ‘ನಗು ಮಗು’ ವಾಹನ
ರಾಯಬಾಗ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ‘ನಗು ಮಗು’ ವಾಹನ   

ರಾಯಬಾಗ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಂದಿರು ಮತ್ತು ಶಿಶುಗಳಿಗೆ ಅಗತ್ಯವಿದ್ದ ‘ನಗು ಮಗು’ ವಾಹನ ಸೌಲಭ್ಯ ಕೊರತೆಯ ಬಗ್ಗೆ ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಮೂರು ವರ್ಷಗಳ ಬಳಿಕ ಆಸ್ಪತ್ರೆಗೆ ‘ನಗು ಮಗು’ ವಾಹನ ಆಗಮಿಸಿದೆ.

ತಾಯಂದಿರು ಮತ್ತು ನವಜಾತ ಶಿಶುಗಳಿಗೆ ತುರ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲು ವಾಹನ ಅವಶ್ಯಕವಾಗಿತ್ತು. ಇದುವರೆಗೆ ಈ ಸೌಲಭ್ಯ ಇಲ್ಲದ ಕಾರಣ, ಗ್ರಾಮೀಣ ಭಾಗದ ಗರ್ಭಿಣಿಯರು ಹಾಗೂ ಶಿಶುಗಳು ತೊಂದರೆ ಅನುಭವಿಸುತ್ತಿದ್ದರು. ಇದೀಗ ವಾಹನ ಲಭ್ಯವಾದ ಹಿನ್ನೆಲೆಯಲ್ಲಿ, ತುರ್ತು ಸಂದರ್ಭದಲ್ಲಿ ವೇಗವಾಗಿ ವೈದ್ಯಕೀಯ ನೆರವು ಒದಗಿಸಲು ಸಾಧ್ಯವಾಗಲಿದೆ.

ಸ್ಥಳೀಯರು ಹಾಗೂ ಸಾರ್ವಜನಿಕರು ಈ ಕ್ರಮವನ್ನು ಸ್ವಾಗತಿಸಿ, ‘ಪ್ರಜಾವಾಣಿ’ವರದಿಯ ಪರಿಣಾಮವಾಗಿ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.