
ಪ್ರಜಾವಾಣಿ ವಾರ್ತೆ
ಚಿಕ್ಕೋಡಿ: ತಾಲ್ಲೂಕಿನ ಸದಲಗಾ ಪಟ್ಟಣದ ಹೊರವಲಯದಲ್ಲಿ ದೂಧಗಂಗಾ ನದಿ ದಡದಲ್ಲಿ, ಹಲವು ವರ್ಷಗಳ ಹಿಂದೆ ಮಣ್ಣಲ್ಲಿ ಹುದುಗಿದ್ದ ರಾಮ ಮಂದಿರವನ್ನು ಸ್ಥಳೀಯರು ಹೊರತೆಗೆದಿದ್ದಾರೆ.
‘ಎರಡು ತಲೆಮಾರುಗಳ ಹಿಂದೆ ನಮ್ಮೂರಿನ ನದಿ ದಡದಲ್ಲಿ ರಾಮ ಮಂದಿರ ಇತ್ತು. ಪ್ರವಾಹದ ವೇಳೆ ಮುಳುಗಿತ್ತು ಎಂದು ಹಿರಿಯರು ಹೇಳುತ್ತಿದ್ದರು. ಅಯೋಧ್ಯೆಯಲ್ಲಿ ರಾಮನ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ಯುವಕರು ಸೋಮವಾರ ಇಡೀ ದಿನ ಜೆಸಿಬಿ ಸಾಧನದ ನೆರವಿನಿಂದ ದೇವಸ್ಥಾನಕ್ಕೆ ಶೋಧ ನಡೆಸಿದರು. ಸಂಜೆ ಪತ್ತೆಯಾಯಿತು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶಾಸಕಿ ಶಶಿಕಲಾ ಜೊಲ್ಲೆ ಸ್ಥಳಕ್ಕೆ ಭೇಟಿ ನೀಡಿದರು. ಸದಲಗಾ ಪಟ್ಟಣ ಹಾಗೂ ಸುತ್ತಲಿನ ಜನರು ತಂಡೋಪತಂಡವಾಗಿ ಬಂದು ಮಂದಿರ ನೋಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.