ADVERTISEMENT

ಹಾಕಿ: ರಾಮದುರ್ಗ ಎಸ್.ಎಂ.ಕಲೂತಿ ಕ್ರೀಡಾ ವಸತಿ ಶಾಲೆ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 2:48 IST
Last Updated 19 ಡಿಸೆಂಬರ್ 2025, 2:48 IST
ರಾಮದುರ್ಗ ತಾಲ್ಲೂಕಿನ ಚಂದರಗಿಯ ಎಸ್‌.ಎಂ. ಕಲೂತಿ ಕ್ರೀಡಾ ವಸತಿ ಶಾಲೆಯ ಹಾಕಿ ಕ್ರೀಡಾಪಟುಗಳಾದ ಪ್ರೀತಂ ಪಾಟೀಲ ಮತ್ತು ವಿಜಯಕುಮಾರ ಮಾರಾಪೂರ ರಾಜ್ಯಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಬೆಳ್ಳಿಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಮದುರ್ಗ ತಾಲ್ಲೂಕಿನ ಚಂದರಗಿಯ ಎಸ್‌.ಎಂ. ಕಲೂತಿ ಕ್ರೀಡಾ ವಸತಿ ಶಾಲೆಯ ಹಾಕಿ ಕ್ರೀಡಾಪಟುಗಳಾದ ಪ್ರೀತಂ ಪಾಟೀಲ ಮತ್ತು ವಿಜಯಕುಮಾರ ಮಾರಾಪೂರ ರಾಜ್ಯಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಬೆಳ್ಳಿಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.   

ರಾಮದುರ್ಗ: ತಾಲ್ಲೂಕಿನ ಚಂದರಗಿಯ ಎಸ್.ಎಂ.ಕಲೂತಿ ಕ್ರೀಡಾ ವಸತಿ ಶಾಲೆಯ ಹಾಕಿ ತಂಡವು ಹಾಸನದಲ್ಲಿ ಜರುಗಿದ ರಾಜ್ಯ ಮಟ್ಟದ 14 ವರ್ಷ ವಯೋಮಿತಿಯ ಬಾಲಕರ ಹಾಕಿ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.

ವಿದ್ಯಾರ್ಥಿಗಳಾದ ಪ್ರೀತಂ ಪಾಟೀಲ ಮತ್ತು ವಿಜಯಕುಮಾರ ಮಾರಾಪೂರ ಅವರು ಡಿಸೆಂಬರ್ 21 ರಿಂದ 27 ವರೆಗೆ ಮಧ್ಯಪ್ರದೇಶ ರಾಜ್ಯದ ಟಿಕಮಗರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT