ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ದಾನಮ್ಮ ದೇವಿ ದೇವಸ್ಥಾನ ಎದುರು ಶಿಕ್ಷಕರ ಚಾಳ, ಶಿವಬಸವ ನಗರ, ಚನ್ನಮ್ಮ ಉಪನಗರ, ಶಟಗಾರ ಚಾಳ ಗಜಾನನ ಉತ್ಸವ ಸಮಿತಿಗಳ ವತಿಯಿಂದ ಅತ್ಯಾಕರ್ಷಕವಾಗಿ ರಂಗೋಲಿ ಸ್ಪರ್ಧೆ ನಡೆಯಿತು.
ಯುವತಿಯರು, ಗೃಹಣಿಯರು ಉತ್ಸಾಹದಿಂದ ರಂಗೋಲಿ ಸ್ಪರ್ಧೆಯಲ್ಲಿ ಸ್ಪರ್ಧಿಸಿ ತಮ್ಮ ಪ್ರತಿಭೆ ಹೊರ ಹಾಕಿದರು. ರಂಗು, ರಂಗಿನ ರಂಗೋಲಿ ಬಿಡಿಸಿ ಎಲ್ಲರ ಗಮನ ಸೆಳೆದರು. ರಂಗೋಲಿ ಚಿತ್ರಗಳು ನೋಡುಗರ ಕಣ್ಮನ ಸೆಳೆದವು.
ಪುನೀತ್ ರೃಜಕುಮಾರ್ ಜತೆಗೆ ನಿಂತ ಗಣಪ, ಪುಷ್ಪಾಲಂಕೃತ ವಿನಾಯಕ, ಸಂಚಾರ ಹೊರಟ ಮೂಷಕ ವಾಹನ ಹೀಗೆ ಒಂದಕ್ಕಿಂತ ಒಂದು ಚಿತ್ತಾಕರ್ಷಕವಾಗಿವೆ.
ಲಕ್ಷ್ಮೀ ಚುಳಕಿ (ಪ್ರಥಮ), ಗೀತಾಂಜಲಿ ಆರಾದ್ರಿಮಠ (ದ್ವಿತೀಯ), ರೂಪಾ ಮತ್ತಿಕೊಪ್ಪ (ತೃತೀಯ), ಆರತಿ ಬಡಿಗೇರ (ನಾಲ್ಕನೇ) ಬಹುಮಾನ ಪಡೆದರು. 35ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷರಾದ ರಾಜು ಬಡಿಗೇರ, ಎಸ್.ಎಫ್.ನದಾಫ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಜಿ.ಜಿ.ಸಾಲಿ, ಮಲ್ಲಿಕಾರ್ಜುನ ವಕ್ಕುಂದಮಠ, ರವಿ ಅಂಗಡಿ, ಸಚಿನ ಕಟ್ಟಿಮನಿ, ಕೃಷ್ಣಾ ನರಸಣ್ಣವರ, ಮಂಜುನಾಥ ಮುತವಾಡ, ಅಭಿಷೇಕ ಮರಳಿ, ಪ್ರಕಾಶ ಹಿರೇಮಠ, ಮನೋಹರ ಪತ್ತಾರ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.