ADVERTISEMENT

ಬೆಳಗಾವಿ | ವಿಶೇಷ ಹಾವು ಪತ್ತೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 14:58 IST
Last Updated 23 ಜುಲೈ 2020, 14:58 IST
ಬೆಳಗಾವಿಯ ಉದ್ಯಮಬಾಗ್‌ ಕೈಗಾರಿಕಾ ಪ್ರದೇಶದಲ್ಲಿ ವಧುವಿನ ಹಾವು ಗುರುವಾರ ಕಂಡುಬಂದಿತು
ಬೆಳಗಾವಿಯ ಉದ್ಯಮಬಾಗ್‌ ಕೈಗಾರಿಕಾ ಪ್ರದೇಶದಲ್ಲಿ ವಧುವಿನ ಹಾವು ಗುರುವಾರ ಕಂಡುಬಂದಿತು   

ಬೆಳಗಾವಿ: ಇಲ್ಲಿನ ಉದ್ಯಮಬಾಗ್‌ ಕೈಗಾರಿಕಾ ಪ್ರದೇಶದಲ್ಲಿ ವಿಶೇಷ ಜಾತಿಯ ವಧುವಿನ ಹಾವು (Bridal Snake) ಗುರುವಾರ ಪತ್ತೆಯಾಗಿದೆ.

ಉರಗ ತಜ್ಞ ಆನಂದ ಚಿತ್ತಿ ಅವರು ಈ ಹಾವನ್ನು ಹಿಡಿದು, ಅರಣ್ಯ ಇಲಾಖೆಯವರ ಸುಪರ್ದಿಗೆ ವಹಿಸಿದ್ದಾರೆ.

‘ಈ ಹಾವು ಪರ್ವತ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ವಿಷಕಾರಿಯಲ್ಲ. ಕಪ್ಪು ಮೈ ಬಣ್ಣವಿದ್ದು, ಮಧ್ಯೆ ಮಧ್ಯೆ ಬಿಳಿ ಬಣ್ಣದ ಪಟ್ಟೆಗಳಿವೆ. ಮುತ್ತಿನ ಸರದಂತೆ ಕಾಣುತ್ತದೆ. 14 ರಿಂದ 21 ಇಂಚಿನವರೆಗೆ ಉದ್ದವಾಗಿ ಬೆಳೆಯುತ್ತದೆ. ಸುಮಾರು 3 ವರ್ಷಗಳ ಕಾಲ ಬದುಕುತ್ತದೆ. ಈ ಹಾವು ದಕ್ಷಿಣ ಭಾರತ ಹಾಗೂ ಶ್ರೀಲಂಕಾದಲ್ಲಿ ಕಂಡುಬರುತ್ತದೆ. ಹಲ್ಲಿಗಳು ಇದರ ನೆಚ್ಚಿನ ಆಹಾರವಾಗಿದೆ. ಹಲ್ಲಿಗಳನ್ನು ತಿನ್ನಲು ಮಾನವನ ವಾಸಸ್ಥಾನಗಳನ್ನು ‌ಹುಡುಕಿಕೊಂಡು ಈ ಹಾವು ಬರುತ್ತದೆ. ಕೆಲವೊಮ್ಮೆ ಕಪ್ಪೆಗಳನ್ನು ತಿಂದು ಬದುಕುತ್ತದೆ’ಎಂದು ಆನಂದ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.