ADVERTISEMENT

ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 2:55 IST
Last Updated 13 ಆಗಸ್ಟ್ 2022, 2:55 IST
ಅಥಣಿಯಲ್ಲಿ ಶುಕ್ರವಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೆರವಣಿಗೆ ಮಾಡಲಾಯಿತು
ಅಥಣಿಯಲ್ಲಿ ಶುಕ್ರವಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೆರವಣಿಗೆ ಮಾಡಲಾಯಿತು   

ಅಥಣಿ: ಇಲ್ಲಿನ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಇರುವ ವೃತ್ತದಲ್ಲಿ ಶುಕ್ರವಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಯಿತು. ಕಾಂಗ್ರೆಸ್‌ ಮುಖಂಡ ಎಸ್.ಕೆ. ಬುಟಾಳಿ ಅವರು ₹18 ಲಕ್ಷ ವೆಚ್ಚ ಮಾಡಿ ನಿರ್ಮಿಸಿದ 850 ಕೆ.ಜಿ.ಯ ಕಂಚಿನ ಪ್ರತಿಮೆ ಇದಾಗಿದೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ಪ್ರತಿಮೆಯ ವೈಭವದ ಮೆರವಣಿಗೆ ನಡೆಯಿತು. ನೂರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂ ಡರು. ಡೊಳ್ಳು ಮೇಳದ ಜತೆಗೆ, ಪಟ್ಟಣದ ಯುವಕರು ಕೂಡ ಮೆರವಣಿಗೆಯಲ್ಲಿ ಕುಣಿದು ಸಂಭ್ರಮಸಿದರು.

ಕವಲಗುಡ್ಡದ ಅಮರೇಶ್ವರ ಸ್ವಾಮೀಜಿ,ಗಚ್ಚಿನಮಠದ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ, ಜಮಖಂಡಿಯ ಮಾಧುಲಿಂಗ ಸ್ವಾಮೀಜಿ, ಇಂಚಗೇರಿ ಸಂಪ್ರದಾಯದ ಶಶಿಕಾಂತ ಪಡಸಲಗಿ ಗುರೂಜಿ, ಜಂಬಗಿಯ ಸುರೇಶ ಮಹಾರಾಜರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

ADVERTISEMENT

ಅಮರೇಶ್ವರ ಶ್ರೀ ಮಾತನಾಡಿದರು. ಕಾಂಗ್ರೆಸ್‌ ಚಿಕ್ಕೋಡಿ ಜಿಲ್ಲಾ ಘಟದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಬಸವರಾಜ ಗುಮಟಿ, ಕಲ್ಲಪ್ಪ‌ ಮೇತ್ರಿ, ವಿಠ್ಠಲ ಲಂಗೋಟಿ, ಧರೆಪ್ಪ ಠಕ್ಕಣ್ಣವರ, ಹೊಳೆಪ್ಪ ಪೂಜಾರಿ, ಮಲ್ಲಿಕಾರ್ಜುನ ಬುಟಾಳಿ, ಸಚಿನ ಬುಟಾಳಿ, ಚಿನ್ನಪ್ಪ ಲಂಗೋಟಿ, ಸುರೇಶ ವಾಘಮೋಡೆ, ಚಿದಾನಂದ ಮುಕಣಿ, ವಿಠ್ಠಲ ತಟ್ರೆ, ಬೀರಪ್ಪ ಯಕ್ಕಂಚಿ, ರವಿ ಬಡಕಂಬಿ, ಕಿರಣ ಮೆಂಡಿಗೇರಿ, ಆನಂದ ಲಂಗೋಟಿ, ನಿಂಗಪ್ಪ ಪೂಜಾರಿ, ಅಶೋಕ ಮಾನೆ, ಕಿರಣ ಮೆಂಡಿಗೇರಿ, ಸದಾಶಿವ ನಾಯಿಕ, ವಿಠ್ಠಲ ಪೂಜಾರಿ, ಸಂಭಾಜಿ ವಾಗಮೋಡೆ, ಮಹಾದೇವಿ ಕಿರಣಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.