ADVERTISEMENT

ಆರ್‌ಸಿಯು: ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 14:28 IST
Last Updated 9 ಏಪ್ರಿಲ್ 2025, 14:28 IST
<div class="paragraphs"><p>ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ</p></div>

ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

   

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) 13ನೇ ಘಟಿಕೋತ್ಸವದ ಪ್ರಯುಕ್ತ ಮೂವರು ಸಾಧಕರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗೆ ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ ‘ಡಾಕ್ಟರ್‌ ಆಫ್‌ ಲೆಟರ್ಸ್‌’, ಕಾನೂನು ಕ್ಷೇತ್ರ ಮತ್ತು ಸಂವಿಧಾನ ಜಾಗೃತಿಯಲ್ಲಿ ನಿರತರಾದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಅವರಿಗೆ ‘ಡಾಕ್ಟರ್‌ ಆಫ್‌ ಲಾ’ ಮತ್ತು ಶಿಕ್ಷಣ, ಸಾಮಾಜಿಕ ಸೇವೆ ರಂಗದಲ್ಲಿನ ಸೇವೆಗೆ ವಿಜಯಪುರದ ಸೀಕ್ಯಾಬ್‌ ಸಂಸ್ಥಾಪಕ ಅಧ್ಯಕ್ಷ ಶಮಸುದ್ದೀನ್‌ ಅಬ್ದುಲ್ಲಾ ಪುಣೇಕರ ಅವರಿಗೆ ‘ಗೌರವ ಡಾಕ್ಟರೇಟ್‌’ ಪ್ರದಾನ ಮಾಡಲಾಗುವುದು.

ADVERTISEMENT

‘ಏಪ್ರಿಲ್‌ 11ರಂದು ನಡೆಯುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಹಾಗೂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು’ ಎಂದು ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ತಿಳಿಸಿದ್ದಾರೆ.

ಎಚ್.ಎನ್. ನಾಗಮೋಹನ ದಾಸ್
ಶಮಸುದ್ದೀನ್‌ ಅಬ್ದುಲ್ಲಾ ಪುಣೇಕರ

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.