ADVERTISEMENT

ಮಠಾಧೀಶರು ಒಂದು ಪಕ್ಷಕ್ಕೆ ಸೀಮಿತವಾಗಬಾರದು: ಅಭಿನವ ನಿಜಗುಣ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 5:10 IST
Last Updated 3 ನವೆಂಬರ್ 2025, 5:10 IST
ಪರಮಾನಂದವಾಡಿ ಸಮೀಪದ ಖೇಮಲಾಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನವ ನಿಜಗುಣ ಸ್ವಾಮೀಜಿ ಮಾತನಾಡಿದರು
ಪರಮಾನಂದವಾಡಿ ಸಮೀಪದ ಖೇಮಲಾಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನವ ನಿಜಗುಣ ಸ್ವಾಮೀಜಿ ಮಾತನಾಡಿದರು   

ಪರಮಾನಂದವಾಡಿ: ‘ಇಂದು ಕೆಲ ಮಠಾಧೀಶರು ಒಂದೇ ಪಕ್ಷಕ್ಕೆ ಸೀಮಿತವಾಗುತ್ತಿರುವುದು ಸರಿಯಲ್ಲ. ಹಾಗಾದರೆ ನೀವು ಆ ಪಕ್ಷದ ಗುರುವಾಗುತ್ತೀರಿ ಹೊರತು, ಧರ್ಮಗುರು ಆಗುವುದಿಲ್ಲ’ ಎಂದು ಖೇಮಲಾಪುರದ ಅಭಿನವ ನಿಜಗುಣ ಸ್ವಾಮೀಜಿ ಹೇಳಿದರು.

ಸಮೀಪದ ಖೇಮಲಾಪುರದಲ್ಲಿ ಹಮ್ಮಿಕೊಂಡಿದ್ದ ಬಸವಾನಂದ ಸ್ವಾಮೀಜಿ 19ನೇ ಪುಣ್ಯಸ್ಮರಣೆ ಹಾಗೂ ಅಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಮಠಾಧೀಶರು ಯಾವುದೇ ಯಾವುದೇ ಪಕ್ಷ ಅಥವಾ ಜಾತಿಗೆ ಸೀಮಿತವಾಗಬಾರದು’ ಎಂದರು.

ADVERTISEMENT

ಬಾಗಲಕೋಟೆಯ ಚಿಕ್ಕ ರಾಮಾರೂಢ ಮಠದ ರಾಮಾರೂಢ ಸ್ವಾಮೀಜಿ, ಸೊಲ್ಲಾಪುರದ ಬಸವಾರೂಢ ಮಠದ ಶಿವಪುತ್ರ ಸ್ವಾಮೀಜಿ, ಐನಾಪುರದ ಬಸವೇಶ್ವರ ಸ್ವಾಮೀಜಿ, ಪರಮಾನಂದವಾಡಿಯ ಬ್ರಹ್ಮಾನಂದ ಆಶ್ರಮದ ಅಭಿನವ ಬ್ರಹ್ಮಾನಂದ ಸ್ವಾಮೀಜಿ,  ಕೋಳಿಗುಡ್ಡದ ಸುಜ್ಞಾನ ಕುಟೀರದ ಸ್ವರೂಪಾನಂದ ಸ್ವಾಮೀಜಿ, ಪಾಲಭಾವಿಯ ಶಾಂತಮಲ್ಲ ಕುಟೀರದ ವೀರಯ್ಯ ಸ್ವಾಮೀಜಿ, ಹಿಪ್ಪರಗಿಯ ಸಿದ್ಧಾರೂಢ ಶರಣರು, ಶಕ್ತಿನಗರದ ಸದಾನಂದ ಮಹಾರಾಜರು, ನೀರಮಾನ್ವಿಯ ನರಸಣ್ಣ ಸಾವುಕಾರರು, ಸಿದ್ದಾಪುರದ ಕಾಡಯ್ಯ ಸ್ವಾಮೀಜಿ, ಶಂಕರ ಶರಣರು, ಬಸವರಾಜ ಮೂಡಲಗಿ, ನಂದೇಶ್ವರ ಚಿಟ್ಟಿ, ಬಸವರಾಜ ಸನದಿ, ಅಶೋಕ ಗುಡೋಡಗಿ, ಪ್ರಭುಲಿಂಗ ಪಾಲಭಾವಿ, ಶ್ರೀಮಂತ ಕಾಂಬಳೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.