ADVERTISEMENT

ತಲ್ಲೂರ: ರೇಣುಕಾದೇವಿ ದೇವಸ್ಥಾನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 8:37 IST
Last Updated 28 ನವೆಂಬರ್ 2021, 8:37 IST
ಹಳ್ಳೂರ ಗ್ರಾಮದಲ್ಲಿ ರೇಣುಕಾದೇವಿ ದೇವಸ್ಥಾನ ಕಟ್ಟಡ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸಿದರು. ಶ್ರೀಗಳು ಮತ್ತು ಮುಖಂಡರು ಇದ್ದಾರೆ
ಹಳ್ಳೂರ ಗ್ರಾಮದಲ್ಲಿ ರೇಣುಕಾದೇವಿ ದೇವಸ್ಥಾನ ಕಟ್ಟಡ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸಿದರು. ಶ್ರೀಗಳು ಮತ್ತು ಮುಖಂಡರು ಇದ್ದಾರೆ   

ತಲ್ಲೂರ: ‘ಶ್ರದ್ಧಾ–ಭಕ್ತಿಯ ಕೇಂದ್ರಗಳಾದ ದೇವಾಲಯಗಳು, ನಮ್ಮ ಮೂಲ ಸಂಸ್ಕೃತಿ–ಸಂಸ್ಕಾರ ಉಳಿಸಿ–ಬೆಳೆಸುವ ತಾಣವಾಗಲಿ’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಆಶಯ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ರೇಣುಕಾದೇವಿ ನೂತನ ದೇವಸ್ಥಾನ ಕಟ್ಟಡ ಹಾಗೂ ಕಳಸಾರೋಹಣ ಸಮಾರಂಭವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

‘ಸೈನಿಕರು ಮತ್ತು ರೈತರಿಗೆ ಹೆಚ್ಚಿನ ಬಲ ತುಂಬುವ ಕೆಲಸ ಆಗಬೇಕು’ ಎಂದರು.

ADVERTISEMENT

ರೇಣುಕಾದೇವಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿದರು.

ಬಾಗೋಜಿಕೊಪ್ಪ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ, ಶಿವಲಿಂಗಯ್ಯ ಸ್ವಾಮೀಜಿ, ಮುಖಂಡರಾದ ವಿನಯಕುಮಾರ ದೇಸಾಯಿ, ಅಜಿತಕುಮಾರ ದೇಸಾಯಿ, ವಿದ್ಯಾರಾಣಿ ಸೊನ್ನದ, ವಿಮಲಾಕ್ಷಿ ದೇಸಾಯಿ, ರಮೇಶ ಗೋಮಾಡಿ, ಪುಂಡಲೀಕ ಮೇಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಕಡಬಿ, ಸಂಜಯಕುಮಾರ ದೇಸಾಯಿ, ಪ್ರಪುಲಚಂದ್ರ ದೇಸಾಯಿ, ಮಲ್ಲಿಕಾರ್ಜುನ ಅಣ್ಣಿಗೇರಿ, ಎ.ವಿ. ಇಂಗಳೆ ಪಾಲ್ಗೊಂಡಿದ್ದರು.

ಶಿಕ್ಷಕ ಬಸನಗೌಡ ಅಣ್ಣಿಗೇರಿ ನಿರೂಪಿಸಿದರು. ಡಿ.ಡಿ. ಭೋವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.