ADVERTISEMENT

ಸ್ವಯಂಪ್ರೇರಿತ ಬಂದ್‌ಗೆ ಸಹಕರಿಸಿ: ಜಿ.ಬಿ. ಡಂಬಳ

​ಪ್ರಜಾವಾಣಿ ವಾರ್ತೆ
Published 12 ಮೇ 2021, 14:17 IST
Last Updated 12 ಮೇ 2021, 14:17 IST
ಮುಗಳಖೋಡದಲ್ಲಿ ನಡೆದ ಕೋವಿಡ್ ಜಾಗೃತಿ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಬಿ. ಡಂಬಳ ಮಾತನಾಡಿದರು
ಮುಗಳಖೋಡದಲ್ಲಿ ನಡೆದ ಕೋವಿಡ್ ಜಾಗೃತಿ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಬಿ. ಡಂಬಳ ಮಾತನಾಡಿದರು   

ಮುಗಳಖೋಡ (ಬೆಳಗಾವಿ ಜಿಲ್ಲೆ): ‘ಪಟ್ಟಣದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯುವುದಕ್ಕಾಗಿ ಸ್ವಯಂಘೋಷಿತ ಬಂದ್ ಆಚರಿಸಲು ತೀರ್ಮಾನಿಸಲಾಗಿದೆ. ಎಲ್ಲರೂ ಇದಕ್ಕೆ ಸಹಕಾರ ಕೊಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಬಿ. ಡಂಬಳ ಹೇಳಿದರು.

ಪುರಸಭೆ ಸಭಾಭವನದಲ್ಲಿ ನಡೆದ ಕೋವಿಡ್ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸೆಂಟರ್ ತೆಗೆಯಲು ಬೇಕಾದ ವ್ಯವಸ್ಥೆ ಇದ್ದರೂ ಶಾಸಕ ಹಾಗೂ ಸಂಸದರು ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ’ ಎಂದು ಪುರಸಭೆ ಸದಸ್ಯ ಕರೆಪ್ಪ ಮಂಟೂರ ಆರೋಪಿಸಿದರು.

ADVERTISEMENT

ಶಾಸಕ ಮತ್ತು ಸಂಸದರ ಹೆಸರು ಪ್ರಸ್ತಾಪ ಆಗುತ್ತಿದ್ದಂತೆಯೇ ಗದ್ದಲದ ವಾತಾವರಣ ನಿರ್ಮಾಣವಾಗಿ ಸಭೆ ಮೊಟಕುಗೊಂಡಿತು.

ಉಪಾಧ್ಯಕ್ಷ ಮಹಾವೀರ ಕುರಾಡೆ, ಸದಸ್ಯರಾದ ಗೌಡಪ್ಪ ಖೇತಗೌಡರ, ವಿಠ್ಠಲ ಯಡವಣ್ಣವರ, ಜ್ಯೋತೆಪ್ಪ ಮೆಕ್ಕಳಕಿ, ಆರ್.ಕೆ. ಪಾಟೀಲ, ಪ್ರಕಾಶ ಆದಪ್ಪಗೋಳ, ಕೆಂಪಣ್ಣ ಅಂಗಡಿ, ಎ.ಬಿ. ಮಂಗಸೂಳಿ, ಹಾರೂಗೇರಿ ಪೊಲೀಸ್ ಠಾಣೆ ಪಿಎಸ್‌ಐ ಆರ್.ಎಸ್. ಕಂಗನೊಳ್ಳಿ, ಡಾ.ಕಿರಣ ಹಿಟ್ಟಣಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.