ADVERTISEMENT

ರೋಟರಿ | ಸಾಮಾಜಿಕ ಸ್ಪಂದನೆಗೆ ವೇದಿಕೆ: ಅರುಣ ಭಂಡಾರೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 2:27 IST
Last Updated 26 ಜುಲೈ 2025, 2:27 IST
ಬೈಲಹೊಂಗಲ ರೋಟರಿ ಕ್ಲಬ್‍ದಲ್ಲಿ ನಡೆದ ರೋಟರಿ ಹಾಗೂ ಇನ್ನರ್‌ವ್ಹೀಲ್ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು
ಬೈಲಹೊಂಗಲ ರೋಟರಿ ಕ್ಲಬ್‍ದಲ್ಲಿ ನಡೆದ ರೋಟರಿ ಹಾಗೂ ಇನ್ನರ್‌ವ್ಹೀಲ್ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು   

ಬೈಲಹೊಂಗಲ: ‘ಸಾಮಾಜಿಕವಾಗಿ ಜನರ ಸೇವೆ ಮಾಡಲು ರೋಟರಿ ಸಂಸ್ಥೆಯು ಉತ್ತಮ ವೇದಿಕೆಯಾಗಿದೆ. ಸಮಸ್ಯಗಳಿಗೆ ಸ್ಪಂದಿಸಿ ಪರಿಹಾರ ನೀಡಲು ಪದಾಧಿಕಾರಿಗಳು ಸದಾ ಪ್ರಯತ್ನಿಸಬೇಕು’ ಎಂದು ರೋಟರಿ ಗವರ್ನರ್ ಅರುಣ ಭಂಡಾರೆ ಹೇಳಿದರು.

ಪಟ್ಟಣದ ರೋಟರಿ ಭವನದಲ್ಲಿ ಸೋಮವಾರ ಜರುಗಿದ ರೋಟರಿ ಕ್ಲಬ್ ಹಾಗೂ ಇನ್ನರ್‌ವ್ಹೀಲ್ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾಸ್ಥ್ಯೆ ಸಮಾಜ ನಿರ್ಮಾಣದ ಜೊತೆಗೆ ಅಸಹಾಯಕ ಜನರಿಗೆ ರೋಟರಿ ಸಂಸ್ಥೆಯು ಸದಾ ಬೆನ್ನಲಬಾಗಿ ನಿಂತಿದೆ. ದೇಶದಲ್ಲಷ್ಟೇ ಅಲ್ಲದೇ ವಿದೇಶದಲ್ಲಿಯೂ ಸೇವಾ ಕಾರ್ಯಗಳನ್ನು ಕೈಗೊಂಡಿದೆ’ ಎಂದರು.

ADVERTISEMENT

ಮುಖ್ಯ ಅತಿಥಿ, ಜಿಲ್ಲಾ ರೋಟರಿ ಗವರ್ನರ್ ಶಾಲಿನಿ ಚೌಗಲೆ ಮಾತನಾಡಿ, ‘ರೋಟರಿ, ಇನ್ನರ್‌ವ್ಹೀಲ್ ಸಂಸ್ಥೆಗಳು ಜನತೆಯ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿವೆ. ಮಹಿಳೆಯರನ್ನು ಸಮಾಜದಲ್ಲಿ ಮೂಂಚೂಣಿಯಲ್ಲಿ ತರಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.

ರೋಟರಿ ಕ್ಲಬ್ ನೂತನ ಅಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ, ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ವಿಜಯಾ ಕಳ್ಳಿಬಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಪದಾಧಿಕಾರಿಗಳಿಗೆ ರೋಟರಿ ಮಾಜಿ ಅಧ್ಯಕ್ಷ ಮಹಾಂತೇಶ ಜಿಗಜಿನ್ನಿ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷ್ಯೆ ಸುಮಂಗಲಾ ಜಿಗಜಿನ್ನಿ ಅಧಿಕಾರ ಹಸ್ತಾಂತರಿಸಿದರು.

ರೋಟರಿ ಉಪಾಧ್ಯಕ್ಷ ಅನಿಲ ಚಡಚ್ಯಾಳ, ಕಾರ್ಯದರ್ಶಿ ಆನಂದ ವಾಲಿ, ಜಂಟಿ ಕಾರ್ಯದರ್ಶಿ ಅಯ್ಯನಗೌಡಾ ಪಾಟೀಲ, ಮಹೇಶ ಬೆಲ್ಲದ, ವಿಜಯಕುಮಾರ ಪಾಟೀಲ, ಅರ್ಜುನ ಕಲಕುಟಕರ, ಗೌತಮ ಇಂಚಲ, ಡಾ.ಸಾಗರ ಕುಲಕರ್ಣಿ, ಶಿವಶಂಕರ ತಟವಾಟಿ, ಯುವ ಮುಖಂಡ ಬಸವರಾಜ ಕೌಜಲಗಿ, ಡಾ.ಚಂದ್ರಶೇಖರ ಗಣಾಚಾರಿ, ಡಾ.ಮಹಾಂತೇಶ ಗದಗ, ಡಾ.ನಾಗರಾಜ ಹಲಸಗಿ, ಪ್ರಮೋದಕುಮಾರ ವಕ್ಕುಂದಮಠ, ನಾಗೇಶ ಮರಕುಂಬಿ, ಇನ್ನರ್‌ವ್ಹೀಲ್ ಕಾರ್ಯದರ್ಶಿ ಡಾ.ಗೀತಾ ಪುರಾಣಿಕಮಠ, ಖಜಾಂಚಿ ಸವಿತಾ ಉಡುಪಿ, ವೀಶಾಲಾಕ್ಷಿ ತಟವಾಟಿ, ಶೋಭಾ ಕುಲಕರ್ಣಿ, ಉಶಾ ಬೆಲ್ಲದ, ದೀಪಾ ಹಲಸಗಿ, ಭಾರತಿ ತಟವಾಟಿ, ನೇಹಾ ಘಾನೇಕರ, ಪ್ರೀತಿ ಪಾಟೀಲ ಇದ್ದರು.

ಡಾ.ಬಸವರಾಜ ಮಹಾಂತಶೆಟ್ಟಿ ಸ್ವಾಗತಿಸಿದರು. ಎಲ್‍ಐಸಿ ಅಧಿಕಾರಿ ಸಂಜಯ ಮಹಾಲೆ ನಿರೂಪಿಸಿದರು. ರೋಟರಿಯನ್ ಸುಜಾತಾ ಮಹಾಲೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.