ADVERTISEMENT

ಬೆಳಗಾವಿ ವಲಯ: ₹10,172 ಕೋಟಿ ಜಿಎಸ್‌ಟಿ ಸಂಗ್ರಹ

ಬೆಳಗಾವಿ: ಕಳೆದ ವರ್ಷಕ್ಕಿಂತ ಶೇ 43ರಷ್ಟು ಹೆಚ್ಚು ಆದಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 12:22 IST
Last Updated 30 ಜೂನ್ 2022, 12:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಬೆಳಗಾವಿ ಆಯುಕ್ತಾಲಯದಿಂದ ಪ್ರಸಕ್ತ ವರ್ಷ ₹ 10,172 ಕೋಟಿ ಆದಾಯ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 43ರಷ್ಟು ಹೆಚ್ಚು ಸಂಗ್ರಹವಾಗಿದೆ.

ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡ ಈ ವಲಯದಲ್ಲಿ ಕಳೆದ ವರ್ಷ (2021–22) ₹ 7,124 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಬಾರಿ ಜಿಂದಾಲ್‌ ಸ್ಟೀಲ್‌ನಿಂದ ₹ 3,974 ಕೋಟಿ ಜಿಎಸ್‌ಟಿ ಪಾವತಿಯಾಗಿದ್ದು, ಇಡೀ ರಾಜ್ಯದಲ್ಲಿ ಇದು ಅತಿ ದೊಡ್ಡ ಮೊತ್ತದ ಪಾವತಿಯಾಗಿದೆ.

‘ಉತ್ತರ ಕರ್ನಾಟಕದ ತೆರಿಗೆದಾರರು ನೀಡಿದ ಸಹಕಾರ ಹಾಗೂ ಆಯುಕ್ತಾಲಯದ ಸಿಬ್ಬಂದಿ ಕಾರ್ಯಕ್ಷಮತೆಯಿಂದ ಇಷ್ಟು ದೊಡ್ಡ ಮೊತ್ತದ ಆದಾಯ ಸಂಗ್ರಹವಾಗಿದೆ. ಜೂನ್‌ 1ರಂದು ಇದರ ಸಂಭ್ರಮಾಚರಣೆ ಕೂಡ ಆಯೋಜಿಸಲಾಗಿದೆ’ ಎಂದು ಸಹಾಯಕ ಆಯುಕ್ತ ಸುಂದರ್‌ರಾಜು ಸಾಗಿ ತಿಳಿಸಿದ್ದಾರೆ.

ADVERTISEMENT

ಕಳೆದ ವರ್ಷ ರಾಜ್ಯ ವಲಯದಿಂದ ₹ 48,440 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಮುಂಬೈ ವಲಯ ಹೊರತುಪಡಿಸಿದರೆ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.