ADVERTISEMENT

ಸತ್ತಿ: ಗಣವೇಷಧಾರಿಗಳ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 15:11 IST
Last Updated 6 ಅಕ್ಟೋಬರ್ 2019, 15:11 IST
ಅಥಣಿ ತಾಲ್ಲೂಕು ಸತ್ತಿ ಗ್ರಾಮದಲ್ಲಿ ಭಾನುವಾರ ಆರ್‌ಎಸ್ಎಸ್‌ ಸ್ವಯಂಸೇವಕರು ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿದರು
ಅಥಣಿ ತಾಲ್ಲೂಕು ಸತ್ತಿ ಗ್ರಾಮದಲ್ಲಿ ಭಾನುವಾರ ಆರ್‌ಎಸ್ಎಸ್‌ ಸ್ವಯಂಸೇವಕರು ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿದರು   

ಅಥಣಿ: ‘ದೀಪದಿಂದ ದೀಪಗಳು ವೃದ್ಧಿಸುವಂತೆ ಆರ್‌ಎಸ್ಎಸ್‌ ಸಂಘಟನೆ ಬೆಳೆಯಲಿ’ ಎಂದು ಮುಖಂಡ ರಾಮಗೌಡ ಪಾಟೀಲ ಹಾರೈಸಿದರು.

‌ಸಮೀಪದ ಸತ್ತಿ ಗ್ರಾಮದಲ್ಲಿ ಭಾನುವಾರ ಆರ್‌ಎಸ್‌ಎಸ್‌ ಪಥಸಂಚಲನದ ಬಳಿಕ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘಟನೆಯ ಮುಖ್ಯ ವಕ್ತಾರ ಅಶೋಕ ಶಿಂತ್ರೆ ಮಾತನಾಡಿ, ‘ಮೊದಲು ಶಹರಗಳಲ್ಲಿ ನಮ್ಮ ಸಂಘಟನೆಯ ಪಥಸಂಚಲನಗಳು ನಡೆಯುತ್ತಿದ್ದವು. ಈಗ ಗ್ರಾಮೀಣ ಭಾಗದಲ್ಲೂ ಜರುಗುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದರು.

ADVERTISEMENT

ರಾಜೇಂದ್ರ ಕುಲಕರ್ಣಿ, ಮಾಂತೇಶ ಗುಡ್ಡಾಪೂರ, ಮಹೇಶ ರುದ್ರಗೌಡ, ಬಾಳಪ್ಪ ಬಾಡಗಿ, ರಾಮು ಬಾಡಗಿ ಇದ್ದರು.

ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.