ಆರ್‌ಎಸ್‌ಎಸ್ ಪಥಸಂಚಲನ
ಬೆಳಗಾವಿ: ನಗರದಲ್ಲಿ ವಿಜಯದಶಮಿ ಉತ್ಸವದ ಪ್ರಯುಕ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಸ್ವಯಂಸೇವಕರು ಭಾನುವಾರ ನಡೆಸಿದ ಆಕರ್ಷಕ ಪಥಸಂಚಲನ ಗಮನಸೆಳೆಯಿತು.
ಇಲ್ಲಿನ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದಲ್ಲಿ ಸಮಾವೇಶಗೊಂಡ ಸಾವಿರಾರು ಗಣವೇಷಧಾರಿಗಳು, ಎರಡು ಪ್ರತ್ಯೇಕ ತಂಡಗಳಲ್ಲಿ ಸಾಗಿದರು.
ಒಂದು ತಂಡವು ಸರದಾರ್ಸ್ ಪ್ರೌಢಶಾಲೆ ಮೈದಾನದಿಂದ ಕಾಲೇಜು ರಸ್ತೆ, ರಾಣಿ ಚನ್ನಮ್ಮನ ವೃತ್ತ, ಜಿಲ್ಲಾಧಿಕಾರಿ ಕಚೇರಿ ಆವರಣ, ಚವಾಟ್ ಗಲ್ಲಿ, ನಾನಾಪಾಟೀಲ ಚೌಕ, ಭಡಕಲ್ ಗಲ್ಲಿ, ಕಚೇರಿ ರಸ್ತೆ, ಶನಿವಾರ ಖೂಟ, ಗಣಪತ ಗಲ್ಲಿ, ನರಗುಂದಕರ ಭಾವೆ ಚೌಕ, ಶನಿಮಂದಿರ, ಕುಲಕರ್ಣಿ ಗಲ್ಲಿ, ಟಿಳಕ ಚೌಕ, ರಾಮಲಿಂಗಖಿಂಡ ಗಲ್ಲಿ, ಧರ್ಮವೀರ ಸಂಭಾಜಿ ವೃತ್ತದ ಮಾರ್ಗವಾಗಿ ಸಾಗಿ, ಲಿಂಗರಾಜ ಕಾಲೇಜು ಮೈದಾನ ತಲುಪಿತು.
ಇನ್ನೊಂದು ತಂಡವು ಸರದಾರ್ಸ್ ಪ್ರೌಢಶಾಲೆ ಮೈದಾನದಿಂದ ಶಿರಸಂಗಿ ಲಿಂಗರಾಜರ ವೃತ್ತ, ಕಂಗ್ರಾಳ ಗಲ್ಲಿ, ಕಾಕತಿವೇಸ್, ರಿಸಾಲ್ದಾರ ಗಲ್ಲಿ, ಖಡೇ ಬಜಾರ್ ಪೊಲೀಸ್ ಠಾಣೆ, ಗವಳಿ ಗಲ್ಲಿ, ಗೊಂಧಳಿ ಗಲ್ಲಿ, ಸಮಾದೇವಿ ಗಲ್ಲಿ, ಕಡೋಲ್ಕರ್ ಗಲ್ಲಿ, ಹುತಾತ್ಮ ಚೌಕ, ಮಾರುತಿ ಗಲ್ಲಿ, ಮಾರುತಿ ಮಂದಿರ, ಬಸವನ ಗಲ್ಲಿ, ಟಿಳಕ ಚೌಕ, ರಾಮಲಿಂಗಖಿಂಡ ಗಲ್ಲಿ, ಧರ್ಮವೀರ ಸಂಭಾಜಿ ವೃತ್ತದ ಮಾರ್ಗವಾಗಿ ಸಾಗಿ, ಲಿಂಗರಾಜ ಕಾಲೇಜು ಮೈದಾನ ತಲುಪಿತು.
ಶಿಸ್ತುಬದ್ಧವಾಗಿ ಹೆಜ್ಜೆಹಾಕಿದ ಗಣವೇಷಧಾರಿಗರಿಗೆ ಪುಷ್ಪವೃಷ್ಟಿ ಮಾಡಲಾಯಿತು. ಮಕ್ಕಳು ಮಹಾನ್ ನಾಯಕರ ವೇಷಗಳಲ್ಲಿ ಕಣ್ಮನಸೆಳೆದರು.
ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಾಮಾಜಿಕ ಸಾಮರಸ್ಯ ಪ್ರಮುಖ ಕೃಷ್ಣಭಟ್, ಪೌರ ಕಾರ್ಮಿಕರ ಸಂಘದ ಮುಖಂಡ ಮುನಿಸ್ವಾಮಿ ಭಂಡಾರಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.