ADVERTISEMENT

ಬೆಳಗಾವಿ ನಗರದಲ್ಲಿ ಸದಲಗಾ ಶಾಖೆ ಆರಂಭ: ಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:22 IST
Last Updated 16 ಸೆಪ್ಟೆಂಬರ್ 2025, 2:22 IST
ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ಸದಲಗಾ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕಿನ 64ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಅಧ್ಯಕ್ಷ ಪ್ರಕಾಶ ಪಾಟೀಲ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಉದಯಕುಮಾರ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲಕುಮಾರ ಪಾರಿಸಖೋತ ಇತರರು ಇದ್ದರು.
ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ಸದಲಗಾ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕಿನ 64ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಅಧ್ಯಕ್ಷ ಪ್ರಕಾಶ ಪಾಟೀಲ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಉದಯಕುಮಾರ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲಕುಮಾರ ಪಾರಿಸಖೋತ ಇತರರು ಇದ್ದರು.   

ಚಿಕ್ಕೋಡಿ: ‘ತಂತ್ರಜ್ಞಾನ ಬೆಳೆದಂತೆ ಬ್ಯಾಂಕ್‌ಗಳು ಡಿಜಿಟಲೀಕರಣ ಹೊಂದಬೇಕೆಂಬ ಉದ್ದೇಶದಿಂದ ಎಲ್ಲಾ ಶಾಖೆಗಳಲ್ಲಿ ಸಾಫ್ಟವೇರ್ ಅಳವಡಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಠೇವಣಿ ಸಂಗ್ರಹ ಹೆಚ್ಚಳವಾಗುತ್ತಿರುವುದಕ್ಕೆ ಸದಸ್ಯರು ಬ್ಯಾಂಕಿನ ಮೇಲೆ ಇಟ್ಟಿರುವ ನಂಬಿಕೆಯೇ ಕಾರಣವಾಗಿದೆ’ ಎಂದು ಸದಲಗಾ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ಪಾಟೀಲ ಹೇಳಿದರು.

ತಾಲ್ಲೂಕಿನ ಸದಲಗಾ ಪಟ್ಟಣದ ಸದಲಗಾ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಭಾನುವಾರ ನಡೆದ 64ನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.

‘ಬೆಳಗಾವಿ ನಗರದಲ್ಲಿ ಸದಲಗಾ ಬ್ಯಾಂಕ್ ಶಾಖೆ ತೆರೆಯಲು ನಿರ್ಧರಿಸಲಾಗಿದೆ’ ಎಂದರು.

ADVERTISEMENT

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲಕುಮಾರ ಪಾರಿಸಖೋತ ಮಾತನಾಡಿ, ‘8,025 ಸದಸ್ಯರನ್ನು ಹೊಂದಿರುವ ಬ್ಯಾಂಕಿನಲ್ಲಿ ₹ 8.11 ಕೋಟಿ ನಿಧಿ, ₹ 3.57 ಕೋಟಿ ಷೇರು ಬಂಡವಾಳ, ₹68.85 ಲಕ್ಷ ಹೂಡಿಕೆ ಹಾಗೂ ₹142.56 ಕೋಟಿ ಠೇವಣಿ ಹೊಂದಿದೆ. ₹72.77 ಕೋಟಿ ಸಾಲ ವಿತರಿಸಲಾಗಿದ್ದು, ₹ 53.86 ಲಕ್ಷ ಲಾಭ ಗಳಿಸಿದೆ’ ಎಂದು ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷ ಉದಯಕುಮಾರ ಪಾಟೀಲ, ನಿರ್ದೇಶಕರಾದ ರಜನಿಕಾಂತ ಚೌಗುಲೆ, ಬಾಬಾಸಾಹೇಬ ಖೋತ, ಅಶೋಕ ಪಾಟೀಲ, ಸತೀಶ ಪಾಟೀಲ, ಸಚಿನ ಪಾಟೀಲ, ಪ್ರಶಾಂತ ಪಾಟೀಲ, ರಶೀದ ಮುಜಾವಾರ, ಜಯಕುಮಾರ ಖೋತ, ದರ್ಶನ ಹಾಲಪ್ಪನವರ, ವಿಜಯಕುಮಾರ ಲಡಗೆ, ಅಭಿನಂದನ ಪಾಟೀಲ, ಮಾಣಿಕ ಖೋತ, ಗೀತಾ ತವನಕ್ಕೆ, ಅಜೀತ ಡೋಣವಾಡೆ, ಶ್ರೀಪಾಲ ಮುನ್ನೋಳಿ, ಶ್ರೀಮಂದಾರ ಹೊನವಾಡೆ, ಪುರಸಭೆ ಅಧ್ಯಕ್ಷ ಬಸವರಾಜ ಗುಂಡಕಲ್ಲೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.