ಬೈಲಹೊಂಗಲ: ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ ಜ.26ರಂದು ನಡೆಯಲಿರುವ ಸಂಗೊಳ್ಳಿ ರಾಯಣ್ಣನ 25ನೇ ವರ್ಷದ ಆತ್ಮಜ್ಯೋತಿ ಯಾತ್ರೆಯನ್ನು ಸಕಲ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಗುವುದು ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಿ.ಕೆ.ಮೆಕ್ಕೇದ ಹೇಳಿದರು.
ಪಟ್ಟಣದ ಐಎಂಎ ಹಾಲ್‌ನಲ್ಲಿ ಗುರುವಾರ ನಡೆದ 25ನೇ ವರ್ಷದ ಜ್ಯೋತಿ ಯಾತ್ರೆಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖಂಡರಾದ ಈಶ್ವರ ಹೋಟಿ, ಮಹಾಂತೇಶ ತುರಮರಿ, ಅಧ್ಯಕ್ಷ ರಾಜು ಸೊಗಲ, ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಮಾತನಾಡಿ, 'ರಾಯಣ್ಣನ ಸ್ಮರಣೋತ್ಸವ ಸಮಿತಿಯು ಸತತ 24 ವರ್ಷಗಳಿಂದ ಜ.26ರಂದು ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿಸಿದ ಸ್ಥಳ ನಂದಗಡದಿಂದ ಕಿತ್ತೂರು, ಸಂಗೊಳ್ಳಿ ಮಾರ್ಗವಾಗಿ ವೀರಮಾತೆ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ರಾಯಣ್ಣನ ಆತ್ಮಜ್ಯೋತಿ ತಂದು ಅರ್ಪಿಸಿಕೊಂಡು ಬಂದಿದೆ ಎಂದರು.
ದೇಶಭಕ್ತಿಯ ಜಾಗೃತಿ ಕಾರ್ಯಕ್ಕೆ ನಾಡಿನ ಸಮಸ್ತ ಜನತೆ ಯಾವುದೇ ಜಾತಿ, ಧರ್ಮ, ಪಕ್ಷ, ರಾಜಕೀಯ ರಹಿತವಾಗಿ ಪಾಲ್ಗೊಂಡು ರಾಯಣ್ಣನ ಶೌರ್ಯ, ’ಸಾಹಸ, ದೇಶಪ್ರೇಮವನ್ನು ಇಮ್ಮಡಿಗೊಳಿಸಿಕೊಂಡು ಬಂದಿದ್ದಾರೆ. ಅವರೆಲ್ಲರ ಶ್ರಮದಿಂದಾಗಿ ರಾಯಣ್ಣನ ಸಮಿತಿ ವತಿಯಿಂದ ಬರುವ ಫೆಬ್ರುವರಿ ತಿಂಗಳಿನಲ್ಲಿ ಸಂಗೊಳ್ಳಿ ರಾಯಣ್ಣನ ಆತ್ಮಜ್ಯೋತಿ ಯಾತ್ರೆಯ 25ನೇ ವರ್ಷದ ಬೆಳ್ಳಿ ಹಬ್ವವನ್ನು ರಾಷ್ಟ್ರ ಮಟ್ಟದಲ್ಲಿ ನಡೆಸುವ ಚಿಂತನೆ ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಹಲವಾರು ಚಿಂತಕರು, ಸಾಹಿತಿಗಳು, ವಿದ್ವಾಂಸರು, ರಾಜಕೀಯ ಮುಖಂಡರು, ರಾಯಣ್ಣನ ವಂಶಸ್ಥರು, ಸಮಿತಿ ಸದಸ್ಯರನ್ನು ಕರೆಯಿಸಿ ಗೌರವಿಸಲಾಗುವುದು. ಸ್ಥಳೀಯ, ರಾಜ್ಯ ಮಟ್ಟದ ಕಲಾವಿದರಿಂದ ರಸಮಂಜರಿ, ದೇಶಪ್ರೇಮ ಜಾಗೃತಿಗೊಳಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು. ನಾಡಿನ ಜನತೆ ಭಾಗವಹಿಸಿ ಯಶಸ್ವಿಗೊಳಿಸಬೇಕು' ಎಂದರು.
ಮುಖಂಡರಾದ ಮಂಜುನಾಥ ಮುದಕನಗೌಡರ, ಸಾಗರ ಕುಲಕರ್ಣಿ, ಶ್ರೀಶೈಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ಶಿವಾನಂದ ಬೆಳಗಾವಿ, ರಫೀಕ ಬಡೇಘರ, ಯಲ್ಲಪ್ಪ ದಳವಾಯಿ, ಲಕ್ಷ್ಮಣ ಸೋಮನಟ್ಟಿ, ಮಾರುತಿ ಶರೆಗಾರ ಮಾತನಾಡಿದರು.
ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಸಾನ್ನಿಧ್ಯವಹಿಸಿದ್ದರು. ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಅಶೋಕ ಮೂಗಬಸವ, ಮಹಾಂತೇಶ ಜಿಗಜಿನ್ನಿ, ನಾಗೇಶ ಯಕ್ಕುಂಡಿ, ಎಸ್.ಕೆ.ಮೆಳ್ಳಿಕೇರಿ, ಬಾಬು ದೇಶನೂರ, ರಾಜು ನರಸನ್ನವರ, ಸುಭಾಸ ತುರಮರಿ, ಆನಂದ ತುರಮರಿ, ಮಲ್ಲಿಕಾರ್ಜುನ ಸೊಗಲ, ಮಡಿವಾಳಪ್ಪ ಹೋಟಿ, ಸಂತೋಷ ಹುಣಶೀಕಟ್ಟಿ, ಮಂಜುನಾಥ ಜ್ಯೋತಿ, ಆನಂದ ತೋಟಗಿ, ಬಸವರಾಜ ಸರಾಯದ, ಈರಪ್ಪ ಕಾಡೇಶನವರ, ಶ್ರೀಶೈಲ ಹಂಪಿಹೊಳಿ, ಅನೇಕರು ಇದ್ದರು. ರವಿ ಹುಲಕುಂದ ನಿರೂಪಿಸಿದರು. ರಾಜು ಸೊಗಲ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.