ADVERTISEMENT

ನಿಪ್ಪಾಣಿ: ಸಂತ ಮಾಳುಮಾಮಾ ಭಂಡಾರ ಉತ್ಸವ

ಭಕ್ತಿಮಯ ವಾತಾವರಣದಲ್ಲಿ ಮನಸೂರೆಗೊಂಡ ಅಶ್ವರಿಂಗಣ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 3:05 IST
Last Updated 1 ಮಾರ್ಚ್ 2026, 3:05 IST
ನಿಪ್ಪಾಣಿ ಸಮೀಪದ ಮಹಾರಾಷ್ಟ್ರದ ಹದ್ದಿನಲ್ಲಿರುವ ಮೇತಕೆಯಲ್ಲಿ ಸಂತ ಬಾಳುಮಾಮಾ ಅವರ ಭಂಡಾರ ಉತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಿಪ್ಪಾಣಿ ಸಮೀಪದ ಮಹಾರಾಷ್ಟ್ರದ ಹದ್ದಿನಲ್ಲಿರುವ ಮೇತಕೆಯಲ್ಲಿ ಸಂತ ಬಾಳುಮಾಮಾ ಅವರ ಭಂಡಾರ ಉತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.   

ನಿಪ್ಪಾಣಿ: ಸಂತ ಬಾಳುಮಾಮಾ ಮತ್ತು ಹಾಲಸಿದ್ಧನಾಥ ದೇವರ ಭಂಡಾರ ಉತ್ಸವ ಸಮೀಪದ ಮೇತಕೆ ಗ್ರಾಮದಲ್ಲಿ ಸಡಗರ, ಸಂಭ್ರಮ, ಅದ್ದೂರಿಯಾಗಿ ನಡೆಯಿತು.

ನಗರದಿಂದ ಕೇವಲ 12 ಕಿ.ಮೀ. ದೂರವಿರುವ ಮಹಾರಾಷ್ಟ್ರದ ಹದ್ದಿನಲ್ಲಿ ಬರುವ ಮೇತಕೆ ಗ್ರಾಮದಲ್ಲಿ ತಾಲ್ಲೂಕಿನ ಅಕ್ಕೋಳ ಗ್ರಾಮದಲ್ಲಿ ಜನಿಸಿದ ಸಂತ ಬಾಳುಮಾಮಾ ಮತ್ತು  ಹಾಲಸಿದ್ಧನಾಥ ದೇವರ ಭಂಡಾರ ಉತ್ಸವದಲ್ಲಿ ಅಶ್ವರಿಂಗಣ ಭಕ್ತಿಮಯ ವಾತಾವರಣದಲ್ಲಿ ನಡೆಯಿತು.

ಬೆಳಿಗ್ಗೆ ಪಂಢರಪುರದಲ್ಲಿ 194 ವರ್ಷಗಳ ಪಾದಯಾತ್ರೆಯ ಶ್ರೀಮಂತ ಸಂಪ್ರದಾಯವನ್ನು ಹೊಂದಿರುವ ಅಜಿತಸಿಂಗ್ ರಾಜೇ ಶಿತೋಳೆ ಮನೆತನದ ಕುದುರೆಗಳು ಮೇತಕೆಯಲ್ಲಿ ಆಗಮಿಸಿದ ನಂತರ ದೇವಾಲಯದಲ್ಲಿ ಅವುಗಳ ಪೂಜೆ ನಡೆಯಿತು. ವಿವಿಧೆಡೆಯಿಂದ ಬಂದ ದಿಂಡಿಗಳ ಸದಸ್ಯರಿಂದ ಘೋಷಣೆಗಳ ಮೂಲಕ ಕುದುರೆಗಳನ್ನು ರಿಂಗಣ ಸಮಾರಂಭಕ್ಕೆ ಕರೆತರಲಾಯಿತು.

ADVERTISEMENT

ಜ್ಞಾನೋಬಾ-ಮಾವುಲೊ-ಜ್ಞಾನರಾಜ್ ಮಾವುಲಿ ತುಕಾರಾಂ ಘೋಷಣೆ ರಸ್ತೆಯುದ್ದಕ್ಕೂ ಮೊಳಗಿವು. ಮುಖ್ಯರಸ್ತೆಯಲ್ಲಿ ಹೂವಿನ ಹಾರಗಳು, ರಂಗೋಲಿಗಳಿಂದ ಅಲಂಕರಿಸಲ್ಪಟ್ಟ ಅಂಗಳ, ಹರ್ಷೋದ್ಘಾರಗಳಿಂದ ಇಡೀ ಗ್ರಾಮ ಭಕ್ತಿಮಯ ವಾತಾವರಣದಲ್ಲಿ ತೇಲುತ್ತಿತ್ತು.

ಈ ಸಂದರ್ಭದಲ್ಲಿ ಸದ್ಗುರು ಬಾಳುಮಾಮಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪಾಪಾ ಕೌಲವಕರ, ನೂಲ್ ಮಠದ ಭಗವಾನ ಗಿರಿ ಮಹಾರಾಜ, ಚೇರಮನ್‌ ರಾಜೇಂದ್ರ ಪಾಟೀಲ, ಬಾಬಾಸಾಹೇಬ ಪಾಟೀಲ, ದಯಾನಂದ ಪಾಟೀಲ, ದೇವಪ್ಪ ಪೂಜಾರಿ, ಬಲಿರಾಮ ಮಗರ, ಪದ್ಮಜಾ ತಿವಾಲೆ, ಮೊದಲಾದವರ ಸಹಿತ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಅಶ್ವರಿಂಗಣದಲ್ಲಿ ಓಡುತ್ತಿರುವ ಅಶ್ವಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.