ADVERTISEMENT

ಬೆಳಗಾವಿ ಲೋಕಸಭೆ ಉಪಚುನಾವಣೆ| ಸತೀಶ ಜಾರಕಿಹೊಳಿ ನೂರು ಕೋಟಿ ಒಡೆಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 15:38 IST
Last Updated 29 ಮಾರ್ಚ್ 2021, 15:38 IST
ಸತೀಶ‌ ಜಾರಕಿಹೊಳಿ
ಸತೀಶ‌ ಜಾರಕಿಹೊಳಿ    

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ನೂರು ಕೋಟಿ ರೂಪಾಯಿಗೂ ಮಿಕ್ಕಿ ಆಸ್ತಿ ಹೊಂದಿದ್ದಾರೆ. ₹ 13.62 ಕೋಟಿ ಚರಾಸ್ತಿ ಹಾಗೂ ₹ 113 ಕೋಟಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಇದರಲ್ಲಿ ಸ್ವಯಾರ್ಜಿತ ಆಸ್ತಿಯ ಮೌಲ್ಯವೇ ₹ 121 ಕೋಟಿ ಆಗುತ್ತದೆ. ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವ ಪ್ರಮಾಣಪತ್ರದಲ್ಲಿ ಅವರು ಕುಟುಂಬದ ಆಸ್ತಿ ವಿವರ ಘೋಷಿಸಿದ್ದಾರೆ.

ಪಿಯುಸಿ ವಿದ್ಯಾರ್ಹತೆಯ, 58 ವರ್ಷದ ಅವರು ತಮ್ಮದು ಹಾಗೂ ಪತ್ನಿಯದ್ದು ಕೃಷಿ ಮತ್ತು ವ್ಯವಹಾರ (ಬಿಸಿನೆಸ್) ವೃತ್ತಿ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಯಾವುದೇ ಕ್ರಿಮಿನಲ್ ಮೊಕದ್ದಮೆ ಬಗ್ಗೆ ಉಲ್ಲೇಖಿಸಿಲ್ಲ.

ADVERTISEMENT

ಕೈಯಲ್ಲಿ ₹ 5.04 ಲಕ್ಷ ಇದೆ. ಪತ್ನಿ ಶಕುಂತಲಾ ಬಳಿ ₹90,889, ಪುತ್ರಿ ಪ್ರಿಯಾಂಕಾ ಅವರಲ್ಲಿ ₹ 9,465 ಮತ್ತು ‍ಪುತ್ರ ರಾಹುಲ್‌ ಬಳಿ ₹18,350 ಇದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್ ಖಾತೆಗಳಲ್ಲಿ ₹31.74 ಲಕ್ಷ, ಪತ್ನಿ– ₹ 36.47 ಲಕ್ಷ, ಪುತ್ರಿ ₹ 1.55 ಲಕ್ಷ, ಪುತ್ರ ₹ 2.30 ಲಕ್ಷ ಇದೆ. ಸತೀಶ ಶುಗರ್ಸ್‌, ಘಟಪ್ರಭಾ ಶುಗರ್ಸ್‌, ವೆಸ್ಟರ್ನ್‌ ಘಾಟ್ ಇನ್ಫ್ರಾ, ಸುವರ್ಣ ಕರ್ನಾಟಕ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್ ಮೊದಲಾದ ಕಡೆಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ಕುಟುಂಬದವರದ್ದೂ ಇದೆ.

ಪುತ್ರಿ ಪ್ರಿಯಾಂಕಾಗೆ ₹2.10 ಕೋಟಿ, ₹ 1.63 ಕೋಟಿ, ಯರಗಟ್ಟಿ ಶುಗರ್ಸ್‌ ₹ 38.60 ಲಕ್ಷ ಸಾಲ ನೀಡಿದ್ದಾರೆ. ಪತ್ನಿಯಿಂದ ₹ 98.63 ಲಕ್ಷ ಸಾಲ ಪಡೆದಿದ್ದಾರೆ. 2 ಮಹಿಂದ್ರಾ ಸ್ಕಾರ್ಪಿಯೊ ವಾಹನಗಳಿವೆ. 25 ತೊಲ ಚಿನ್ನ ಹಾಗೂ 4 ಕೆ.ಜಿ. 563 ಗ್ರಾಂ. ಬೆಳ್ಳಿ ಹೊಂದಿದ್ದಾರೆ. ಪತ್ನಿ ಬಳಿ 2,949 ಗ್ರಾಂ. ಚಿನ್ನ, 4.29 ಕೆ.ಜಿ. ಬೆಳ್ಳಿ, ಪುತ್ರಿ ಬಳಿ 100 ಗ್ರಾಂ. ಚಿನ್ನವಿದೆ.

ಸ್ಥಿರಾಸ್ತಿಯಲ್ಲಿ ವಿವಿಧೆಡೆ ಹೊಂದಿರುವ ಕೃಷಿ ಭೂಮಿ, ವಾಣಿಜ್ಯ ನಿವೇಶನ, ನಿವೇಶನ, ಮನೆಗಳ ಮಾಹಿತಿ ನೀಡಿದ್ದಾರೆ.

₹ 6.75 ಕೋಟಿ ಸಾಲ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ ₹4.48 ಕೋಟಿ, ಪುತ್ರಿ ₹ 2.34 ಕೋಟಿ ಹಾಗೂ ಪುತ್ರನ ಹೆಸರಲ್ಲಿ ₹ 1.82 ಕೋಟಿ ಸಾಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.