ADVERTISEMENT

ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ ಸಲ್ಲ:

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 14:58 IST
Last Updated 5 ಜೂನ್ 2024, 14:58 IST
ಸವದತ್ತಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ ಸಸಿಗೆ ನೀರುಣಿಸಿದರು
ಸವದತ್ತಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ ಸಸಿಗೆ ನೀರುಣಿಸಿದರು   

ಸವದತ್ತಿ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ, ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದಿಂದ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನ ಸೆಷನ್ಸ್‌ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ ಅವರು ಸಸಿಗೆ ನೀರುಣಿಸಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಮನುಷ್ಯನ ದುರಾಸೆಯಿಂದ ಪ್ರಾಣಿ–ಪಕ್ಷಿಗಳು ಅವಸಾನದತ್ತ ಸಾಗಿವೆ. ಪರಿಸರ ಸಮತೋಲನದಿಂದ ಉತ್ತಮ ಮಳೆ, ನಿಯಮಿತ ತಾಪಮಾನ ಸಾಧ್ಯವಿದೆ. ಅಭಿವೃದ್ಧಿ ಹೆಸರಲ್ಲಿ ಪರಿಸರ ಹಾಳು ಮಾಡಬಾರದು’ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ, ವಲಯ ಅರಣ್ಯಾಧಿಕಾರಿ ಶಂಕರ ಅಂತರಗಟ್ಟಿ, ಎಂ.ಎಫ್. ಬಾಡಿಗೇರ, ಲಿಂಗರೆಡ್ಡಿ ಮಂಕಣಿ, ಎಸ್.ಬಿ. ಬಿಸಗುಪ್ಪಿ, ಎಸ್.ಎಂ. ಗೋಂದಕರ, ರಾಜಶೇಖರ ನಿಡವಣಿ, ಬಿ.ಎಂ. ಯಲಿಗಾರ, ಸಿ.ಜಿ. ತುರಮರಿ, ಎಫ್.ಎಂ. ಕಾಳೆ, ಪಿ.ಎನ್. ಡೊಳ್ಳಿನ, ವೈ.ಎನ್. ಪಾಸ್ತೆ, ಎಸ್.ವಿ. ಶಿರಹಟ್ಟಿಮಠ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.