ADVERTISEMENT

ಸವದತ್ತಿ | ಅನೈತಿಕ ಸಂಬಂಧ ಶಂಕೆ: ವ್ಯಕ್ತಿ ಕೊಲೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:34 IST
Last Updated 4 ಫೆಬ್ರುವರಿ 2026, 7:34 IST
ಬಸಪ್ಪ ಹೊಸಮನಿ
ಬಸಪ್ಪ ಹೊಸಮನಿ   

ಸವದತ್ತಿ: ‘ತಾಯಿಯ ಜತೆಗೆ ಸಲುಗೆ ಹೊಂದಿದ್ದ ಎಂಬ ಶಂಕೆಯಿಂದ ಈರಯ್ಯ ಮಠಪತಿ (30) ಎಂಬಾತ, ಬಸಪ್ಪ ಹೊಸಮನಿ (51) ಅವರನ್ನು ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿ ನಡೆದಿದೆ.

ಆರೋಪಿಯು ಚಾಕುವಿನಿಂದ 16 ಬಾರಿ ಇರಿದಿದ್ದು, ಬಳಿಕ ಬಸಪ್ಪ ಹೊಸಮನಿ ಶವದ ಮೇಲೆ ಕಾಲಿಟ್ಟು ಫೋಟೊ ಹಾಗೂ ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಟ್ಟಿದ್ದಾನೆ.

ಸವದತ್ತಿ– ರಾಮದುರ್ಗ ಮಧ್ಯದ ಹೂಲಿಕಟ್ಟಿ ಬಳಿ ಬಸಪ್ಪ ಬೈಕಿನಲ್ಲಿ ಬರುವಾಗ ತಡೆದ ಈರಯ್ಯ, ಜಗಳ ತೆಗೆದಿದ್ದಾನೆ. ಆಗ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿದೆ. ಬಸಪ್ಪನಿಗೆ ಕುತ್ತಿಗೆ, ತಲೆ, ಎದೆಗೆ ಇರಿದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟರು. ಈರಯ್ಯನಿಗೂ ಗಾಯಗಳಾಗಿದ್ದು, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಕೃತ್ಯದ ಬಳಿಕ ಆರೋಪಿ ಶವದ ಎದೆ ಮೇಲೆ ಕಾಲಿಟ್ಟು ಪೋಸ್‌ ಕೊಟ್ಟಿರುವ ಫೋಟೊ ಮಂಗಳವಾರ ಜಾಲತಾಣಗಳಲ್ಲಿ ಹರಿದಾಡಿತು. ಪೊಲೀಸರು ಬರುವವರೆಗೂ ಆರೋಪಿ ಸ್ಥಳದಲ್ಲೇ ಇದ್ದು ಶರಣಾಗಿದ್ದಾನೆ.  ಫೋಟೊ ತೆಗೆದ, ವಿಡಿಯೊ ಮಾಡಿದ್ದ ಆರೋಪಿಯ ಸಹೋದರನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಬಸಪ್ಪ 15 ವರ್ಷಗಳ ಹಿಂದೆ ಈರಯ್ಯನ ತಾಯಿ ಜತೆಗೆ ಸಲುಗೆ ಬೆಳೆಸಿಕೊಂಡಿದ್ದ. ಆಗ ಎರಡೂ ಕುಟುಂಬಗಳ ಮಧ್ಯೆ ತಂಟೆಗಳು ನಡೆದಿದ್ದವು. ಬಳಿಕ ಬಸಪ್ಪ ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದ. ಈಚೆಗೆ ಮರಳಿ ಬಂದು ಆರೋಪಿಗಳ ಮನೆಯ ಮುಂದೆಯೇ ಮನೆ ಕಟ್ಟಿಸುತ್ತಿದ್ದ. ಇದರಿಂದ ಕೋಪಗೊಂಡು ಕೊಲೆ ನಡೆದಿರಬಹುದು ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

ಈರಯ್ಯ ಮಠಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.