ADVERTISEMENT

ಐವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 5:03 IST
Last Updated 30 ಮಾರ್ಚ್ 2023, 5:03 IST
ಜ್ಯೋತಿ ಹೊಸಟ್ಟಿ
ಜ್ಯೋತಿ ಹೊಸಟ್ಟಿ   

ಬೆಳಗಾವಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಐವರು ಮಹಿಳೆಯರಿಗೆ ಬೆಳಗಾವಿಯ ನಿಯತಿ ಫೌಂಡೇಷನ್‌ ವತಿಯಿಂದ ‘ಸಾವಿತ್ರಿಬಾಯಿ ಫುಲೆ’ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಗಿದೆ.

ಜಿಲ್ಲೆಯ ಉದ್ಯಮ ವಲಯದಲ್ಲಿ ಛಾಪು ಮೂಡಿಸಿದ, ಹಲವರಿಗೆ ಉದ್ಯೋಗ ಒದಗಿಸಿದ ವಿದ್ಯಾ ಮರಕುಂಬಿ ಅವರ ಜೀವನ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಸೌರಶಕ್ತಿ ಉತ್ಪಾದನೆ, ಸಕ್ಕರೆ ಉದ್ಯಮದಲ್ಲಿ ಸಾಧನೆ ಹಾಗೂ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಸೆಟ್‌ಗಳನ್ನು ಪರಿಚಯಿಸಿದ್ದು ಅವರ ಹೆಗ್ಗಳಿಕೆ.

ಈಜು ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆ ಮಾಡಿದ ಜ್ಯೋತಿ ಪಿ. ಹೊಸಟ್ಟಿ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಹಾಗೂ ಸ್ವಾವಲಂಬನೆ ಸಾಧಿಸಿದ ಅನಿತಾ ದತ್ತ ಕಣಬರ್ಗಿ, ದೇಶದ ಅತಿ ಉದ್ದದ ಮ್ಯಾರಾಥಾನ್‌ ಪಟುಗಳಲ್ಲಿ ಒಬ್ಬರಾದ ಅಂಜಲಿ ಶಹಾ, 35ಕ್ಕೂ ಹೆಚ್ಚು ಕೃತಿಗಳನ್ನು ಬರೆದ ಸಾಹಿತಿ ಆದ ಆಶಾ ರತನ್‌ಜಿ ಅವರನ್ನೂ ಪ್ರಶಸ್ತಿಗೆ ಪರಿಗಣಿಸಲಾಗಿದೆ.

ADVERTISEMENT

ಬಿಜೆಪಿ ಮಹಿಳಾ ಘಟಕದ ನಾಯಕಿ ಡಾ.ಸೋನಾಲಿ ಸರನೋಬತ್‌ ಅವರು ನಿಯತಿ ಫೌಂಡೇಷನ್ ಸ್ಥಾಪನೆ ಮಾಡಿದ್ದು, ಪ್ರತಿ ವರ್ಷ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.