ನಿಪ್ಪಾಣಿ: ತಾಲ್ಲೂಕಿನ ಶ್ರೀಪೇವಾಡಿ ಗ್ರಾಮದ ಜಿ.ಎಂ. ಸಂಕಪಾಳ ಪ್ರೌಢಶಾಲೆಯಲ್ಲಿ ಶನಿವಾರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗುಲಿ ಕಂಪ್ಯೂಟರ್ ಪ್ರಯೋಗಾಲಯ ಹಾನಿ ಉಂಟಾದ ಹಿನ್ನಲೆ ಶಾಸಕಿ ಶಶಿಕಲಾ ಜೊಲ್ಲೆ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ,ಮಾಹಿತಿ ಪಡೆದು,ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು 'ಕೋಣೆಯಲ್ಲಿ 25 ಕಂಪ್ಯೂಟರ್ ಗಳು ಸಂಪೂರ್ಣ ಸುಟ್ಟು ಹೋಗಿವೆ. ಶಾಸಕರ ಅನುದಾನದಲ್ಲಿ ಕಂಪ್ಯೂಟರ್ ನೀಡಲಾಗುವುದು ಮತ್ತು ಶಾಲೆ ಕೋಣೆಯನ್ನು ಆದಷ್ಟು ಬೇಗನೆ ರಿಪೇರಿ ಮಾಡಿಕೊಡಲಾಗುವುದು' ಎಂದು ಭರವಸೆ ನೀಡಿದರು.
'ಈ ಶಾಲೆಯಲ್ಲಿ 800 ಕ್ಕಿಂತ ಹೆಚ್ಚು ವಿಧ್ಯಾರ್ಥಿಗಳು ಓದುತ್ತಿದ್ದು ಅವರಿಗೆ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯಕವಾಗಿದೆ. ಸರ್ಕಾರದಿಂದ ಅನುದಾನ ಬರುವ ಹಾಗೆ ಪ್ರಯತ್ನ ಮಾಡಲಾಗುವುದು' ಎಂದರು.
ಶಾಲೆಯ ಅಧ್ಯಕ್ಷ ಡಾ. ಅಶೋಕ ಪೂಜಾರಿ, ಉಪಾಧ್ಯಕ್ಷ ಅವಿನಾಶ ಪಾಟೀಲ, ನಿರ್ದೇಶಕ ದತ್ತಾತ್ರೇಯ ವಡಗಾವೆ, ಗಜಾನನ ಶಿಂಧೆ, ಸಮಿತ ಸಾಸನೆ, ಸಿದ್ದು ನರಾಟೆ, ಪ್ರಭಾಕರ ಪಾಟೀಲ, ಸಾಗರ ಚೆಂಡಕೆ, ಪಿಂಟು ಸಾಸನೆ, ಸಾಗರ ಪಾಟೀಲ, ಬಾಬುರಾವ ಲಾಟಕರ, ವಿಜಯ ಜಬಡೆ, ಪ್ರಶಾಂತ ಪಾಟೀಲ, ಮುಖ್ಯ ಶಿಕ್ಷಕ ಜೆ.ಎಸ್. ಜಾಧವ, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.