ADVERTISEMENT

ಬೆಳಗಾವಿ | ವೈಜ್ಞಾನಿಕ ಕೃಷಿಯಿಂದ ಅಧಿಕ ಲಾಭ: ರೈತರ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 2:45 IST
Last Updated 18 ಅಕ್ಟೋಬರ್ 2025, 2:45 IST
ಮುಗಳಖೋಡ ಸಮೀಪದ ದೇವಾಪೂರಹಟ್ಟಿಯ ರೈತ ಗೋಪಾಲ ಜಾಧವ ಅವರು ತಮ್ಮ ಹೊಲದಲ್ಲಿ ಬೆಳೆದ ಡೊಣ್ಣ ಮೆಣಸಿನಕಾಯಿ ಪ್ರದರ್ಶನ ಮಾಡಿದರು
ಮುಗಳಖೋಡ ಸಮೀಪದ ದೇವಾಪೂರಹಟ್ಟಿಯ ರೈತ ಗೋಪಾಲ ಜಾಧವ ಅವರು ತಮ್ಮ ಹೊಲದಲ್ಲಿ ಬೆಳೆದ ಡೊಣ್ಣ ಮೆಣಸಿನಕಾಯಿ ಪ್ರದರ್ಶನ ಮಾಡಿದರು   

ಮುಗಳಖೋಡ: ‘ಈ ವರ್ಷ ನಾನು ಡೊಣ್ಣ ಮೆಣಸಿನಕಾಯಿ ಬೆಳೆದಿದ್ದೇನೆ. ಇದೀಗ 8 ಕಟಾವುಗಳನ್ನು ಮಾಡಿ ₹8.5 ಲಕ್ಷ ಲಾಭಾಂಶ ಬಂದಿದೆ. ಇನ್ನೂ ₹8 ಲಕ್ಷಗಳವರೆಗೆ ಲಾಭಾಂಶ ಬರಲಿದೆ. ಸರಿಯಾದ ಬೀಜೋಪಚಾರ ಹಾಗೂ ಔಷಧೋಪಚಾರ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು’ ಎಂದು ದೇವಾಪೂರಹಟ್ಟಿಯ ರೈತ ಗೋಪಾಲ ಜಾಧವ ಹೇಳಿದರು.

ಸಮೀಪದ ದೇವಾಪೂರಹಟ್ಟಿಯ ಅವರ ತೋಟದಲ್ಲಿ ನಡೆದ ಡೊಣ್ಣ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಳೆ ಪ್ರದರ್ಶನದಲ್ಲಿ ಅವರು ಮಾಹಿತಿ ನೀಡಿದರು.

‘ಸುಮಾರು 12 ವರ್ಷಗಳಿಂದ ತರಕಾರಿ ಬೆಳೆಗಳಾದ ಕೊತ್ತಂಬರಿ, ಟೊಮೆಟೊ, ಹೂಕೋಸು, ಮೆಂತೆ, ಬಾಳೆ, ಉದ್ದ ಮತ್ತು ಕಾರ ಮೆನಸು ಬೆಳೆಯುತ್ತ ಬಂದಿದ್ದೇನೆ. ಆದರೆ ಈ ವರ್ಷ ಸುಮಾರು ₹3.5 ಲಕ್ಷ ಹಣ ಖರ್ಚು ಮಾಡಿ ‘ಇಂಡಸ್‌-11’ ತಳಿಯ ಡೊಣ್ಣ ಮೆಣಸಿನಕಾಯಿ ಬೆಳೆದಿದ್ದೇನೆ. ಇಷ್ಟೊಂದು ಲಾಭಾಂಶ ಪಡೆಯಲು ವೀರಾ ಆಗ್ರೋ ಮತ್ತು ರುದ್ರಾ ಆಗ್ರೊ ಕಂಪನಿಯ ಮಾರ್ಗದರ್ಶನ ಕಾರಣ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಉದ್ಯಮಿ ವೃಶಾಲ ಪಾಟೀಲ, ‘ರೈತರು ಹೆಚ್ಚಾಗಿ ದೊಡ್ಡ ವಾಣಿಜ್ಯ ಬೆಳೆಗಳ ಬೆನ್ನು ಬಿದ್ದು ಕಡಿಮೆ ಲಾಭ ಪಡೆಯುತ್ತಿದ್ದಾರೆ. ಕಡಿಮೆ ಜಮೀನಿನಲ್ಲಿ, ಕಡಿಮೆ ಅವಧಿಯಲ್ಲಿ ಲಕ್ಷಾಂತರ ರೂಪಾಯಿಗಳ ಲಾಭ ಪಡೆಯಬಹುದಾದ ಸಾಕಷ್ಟು ಬೆಳೆಗಳು ಇವೆ. ಉತ್ತಮ ಔಷಧೋಪಚಾರ ಮಾಡಿರೆ ಅಧಿಕ ಇಳುವರಿ ಪಡೆಯಬಹುದು’ ಎಂದರು.

‘ರೈತರು ಯಾವ ಯಾವ ಹಂಗಾಮಿನಲ್ಲಿ ಯಾವ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ, ಯಾವ ಯಾವ ತರಹದ ಬೀಜೋಪಚಾರ, ಔಷಧೋಪಚಾರ ಮಾಡಬೇಕು ಎಂಬುದನ್ನು ತಿಳಿಯಬೇಕು. ಯಾವುದೇ ರೋಗ ಬಂದರೂ ಅದಕ್ಕೆ ನೇರವಾಗಿ ರೈತರು ಇರುವಲ್ಲಿಗೆ ಬಂದು ನೋಡಿ ಪರೀಕ್ಷಿಸಿ ಸರಿಯಾದ ರೀತಿಯಲ್ಲಿ ಕಡಿಮೆ ದರದಲ್ಲಿ ಔಷಧವನ್ನು  ಸಿದ್ದಪಡಿಸಿ ಕೊಟ್ಟು ಮಾರ್ಗದರ್ಶನವನ್ನು ಮಾಡುವ ಕಂಪನಿಗಳೂ ಈಗ ಇವೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಗೋಪಾಲ ಜಾಧವ ಹಾಗೂ ಅವರ ಮಗ ಅನಿಲ ಅವರಿಗೆ ವೀರಾ ಆಗ್ರೋ ಹಾಗೂ ರುದ್ರಾ ಆಗ್ರೋ ವತಿಯಿಂದ ಸನ್ಮಾನ ಮಾಡಿದರು. ಅನಿಲ ಜಾದವ, ಮಲ್ಲಿಕಾರ್ಜುನ ತೇಲಿ, ಸತೀಶ ಚಿನಗುಂಡಿ, ಈರಣ್ಣಗೌಡ ಬೋರೆಡ್ಡಿ, ಶ್ರೀಶೈಲ ಪಾಟೀಲ, ರಮೇಶ ಉಳ್ಳಾಗಡ್ಡಿ, ಮಲ್ಲೇಶ ಕೌಜಲಗಿ, ಬಸವರಾಜ ತೇಲಿ, ಅಲ್ಲಪ್ಪ ಉಳ್ಳಾಗಡ್ಡಿ, ಸಂಜು ನಾಂದ್ರೇಕರ ಸದಾಶಿವ ಕಂಕನವಾಡಿ, ಆನಂದ ಉಳ್ಳಾಗಡ್ಡಿ, ರತ್ನಪ್ಪ ಗೋಣಿ, ದರೆಪ್ಪ  ಹಂಜೆ, ಸಚಿನ ಪಾಟೀಲ, ಸಂತೋಷ ಮಸಳೆ, ಇತರರು ಇದ್ದರು.

ರೈತರು ವಾಣಿಜ್ಯ ಬೆಳೆ ಜೊತೆಗೆ ಇತರೆ ಬೆಳೆಗಳನ್ನು ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಯಬೇಕು. ಹವಾಮಾನ ತಕ್ಕಂತೆ ಔಷಧೋಪಚಾರ ತಜ್ಞರಿಂದ ಮಾಹಿತಿ ಪಡೆಯಬೇಕು
ಮಲ್ಲಿಕಾರ್ಜುನ ತೇಲಿ  ಪ್ರಗತಿಪರ ರೈತ ಹಂದಿಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.