ADVERTISEMENT

ಬೀಜದುಂಡೆ ತಯಾರಿಕೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 17:16 IST
Last Updated 26 ಜೂನ್ 2019, 17:16 IST
ಅಥಣಿ ತಾಲ್ಲೂಕಿನ ಕೊಕಟನೂರ ಸಸ್ಯಪಾಲನಾಲಯದಲ್ಲಿ ನಡೆದ ಬೀಜದುಂಡೆ ತಯಾರಿಕೆ ಕಾರ್ಯಕ್ರಮದಲ್ಲಿ ಮಕ್ಕಳು, ಶಿಕ್ಷಕರು ಮತ್ತು ಅರಣ್ಯ ಇಲಾಖೆಯವರು ಭಾಗವಹಿಸಿದ್ದರು
ಅಥಣಿ ತಾಲ್ಲೂಕಿನ ಕೊಕಟನೂರ ಸಸ್ಯಪಾಲನಾಲಯದಲ್ಲಿ ನಡೆದ ಬೀಜದುಂಡೆ ತಯಾರಿಕೆ ಕಾರ್ಯಕ್ರಮದಲ್ಲಿ ಮಕ್ಕಳು, ಶಿಕ್ಷಕರು ಮತ್ತು ಅರಣ್ಯ ಇಲಾಖೆಯವರು ಭಾಗವಹಿಸಿದ್ದರು   

ಅಥಣಿ: ತಾಲ್ಲೂಕಿನ ಕೊಕಟನೂರ ಸಸ್ಯಪಾಲನಾಲಯದಲ್ಲಿ ಅರಣ್ಯ ಇಲಾಖೆ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಬಿಇಒ ಕಚೇರಿ ಸಹಯೋಗದಲ್ಲಿ ಬೀಜದುಂಡೆ ತಯಾರಿಕೆ ಕುರಿತು ಮಕ್ಕಳಿಗೆ ತರಬೇತಿ ನೀಡಲಾಯಿತು.

ಪಟ್ಟಣದ ಕೆಎಲ್ಇ ರಣಮೋಡೆ ಇಂಗ್ಲಿಷ್ ಮಾಧ್ಯಮ ಶಾಲೆ, ಕೆಎಚ್‌ಪಿಎಸ್ ನಂ.3, ಕೆಎಚ್‌ಪಿಎಸ್ ಸುಟ್ಟಟ್ಟಿ, ಸರ್ಕಾರಿ ಪ್ರೌಢಶಾಲೆ ಬಳವಡ, ಎಸ್ಎಎಸ್ ಪ್ರೌಢಶಾಲೆ ಐಗಳಿ, ಕೆಎಚ್‌ಪಿಎಸ್‌ ಕಟಗೇರಿಯ 250 ಮಕ್ಕಳು ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಾ ಹೊನಗೌಡರ ಚಾಲನೆ ನೀಡಿದರು. ಆರ್‌ಎಫ್‌ಒ ಪ್ರಶಾಂತ ಗೌರಾಣಿ, ಸಿಬ್ಬಂದಿ ರಾಜೇಶ ಪಾಟೀಲ, ದಯಾನಂದ ತರಬೇತಿ ನೀಡಿದರು. ‘ಮಗುವಿಗೊಂದು ಮರ, ಶಾಲೆಗೊಂದು ವನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಸಿ ವಿತರಿಸಿದರು.

ADVERTISEMENT

ಗ್ರಾಮದ ಮುಖಂಡರಾದ ಎಸ್.ಎ. ವಾಲಿ, ಎ.ಎಂ. ಡಾಂಗೆ, ಎ. ಖೋತ, ಡಿ.ಬಿ. ಅತ್ತಾರ, ಎ.ವೈ. ಹೈಬತ್ತಿ, ಎಲ್.ಎಂ. ಶಾಂತಕುಮಾರ, ಐ.ಎಂ. ಕಮಲಾನ್ನವರ, ಸೂರ್ಯಕಾಂತ ಮಗದುಮ್, ಮೌಲಾಸಾಬ ನಾಗನೂರ, ಸುನೀತಾ ಕಿದ್ರಾಪುರ, ಎಸ್.ಎಸ್. ಮೋಳೆ, ಜಿ.ಬಿ. ಕಟ್ಟಿ, ಕಸ್ತೂರಿ ನಿಡೋಣಿ, ಎಸ್.ಬಿ. ಮಾನೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.