ADVERTISEMENT

ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 13:57 IST
Last Updated 11 ಡಿಸೆಂಬರ್ 2019, 13:57 IST

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ.

ಬೆನನ್ ಸ್ಮಿತ್‌ ಮೆಥೋಡಿಸ್ಟ್ ಪದವಿ ಕಾಲೇಜಿನಲ್ಲಿ ಈಚೆಗೆ ನಡೆದ ರಾಜ್ಯಶಾಸ್ತ್ರ ವಿಷಯದ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯದ ಉದ್ಘಾಟನಾ ಸಮಾರಂಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರೊ.ಎಸ್.ಎ.ಶಾಸ್ತ್ರಿಮಠ, ಉಪಾಧ್ಯಕ್ಷರಾಗಿ ಪ್ರೊ.ಎಸ್.ಆರ್.ಮುಲ್ಲಾ, ಪ್ರೊ.ಬಿ.ಜಿ.ಪಾಟೀಲ, ಪ್ರೊ.ಜೆ.ಐ.ಜೋಡಂಗಿ, ಡಾ.ಬಿ.ಎಂ.ಕೋರಬು ಹಾಗೂ ಡಾ.ಐ.ಜೆ.ಬೆಳ್ಳೆನ್ನವರ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಡಾ.ಪಿ.ಬಿ.ನರಗುಂದ, ಖಜಾಂಚಿಯಾಗಿ ಬಿ.ಜಿ.ಕುಲಕರ್ಣಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರೊ.ಪಿ.ಬಿ.ಮುನ್ಯಾಳ, ಡಾ.ವಿ.ಬಿ. ಪಾಟೀಲ, ಡಾ.ವಿ.ಬಿ.ವೆಂಕಟೇಶಪ್ಪ, ಡಾ.ಅಪ್ಪು ರಾಠೋಡ, ಪ್ರೊ.ಎ.ಎಂ.ಉಗಾರೆ, ಡಾ.ಅಜಯ ಅಬ್ಬಾರ ಹಾಗೂ ಮಹಿಳಾ ಪ್ರತಿನಿಧಿಯಾಗಿ ಡಾ.ರಿಜ್ವಾನಾ ಗಡಕರಿ ಆಯ್ಕೆಯಾಗಿದ್ದಾರೆ.

ADVERTISEMENT

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಪದವಿ ಕಾಲೇಜುಗಳ ರಾಜ್ಯಶಾಸ್ತ್ರ ವಿಷಯದ ಮೌಲ್ಯಮಾಪಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.