
ಹುಕ್ಕೇರಿ: ‘ಅಧಿಕಾರ ಬಂದಾಗ ಜನ ಸೇವೆ ಮಾಡುವುದು ತುಂಬಾ ಮುಖ್ಯ. ನಿಸ್ವಾರ್ಥದಿಂದ ಜನಸೇವೆ ಮಾಡಿ ಜನಮನ ಗೆಲ್ಲಿರಿ’ ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮಹಾವೀರ್ ವಸಂತ ನಿಲಜಗಿ ಅವರನ್ನು ಧರ್ಮಸ್ಥಳದಲ್ಲಿ ಸನ್ಮಾನಿಸಿ ಮಾತನಾಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ , ಮಹಾವೀರ ನಿಲಜಗಿ ಮನೆತನ ಧರ್ಮಸ್ಥಳದ ಬಗ್ಗೆ ಅಪಾರ ಶ್ರದ್ದೆ ಇಟ್ಟುಕೊಂಡಿದೆ. ಅವರಿಗೆ ಕ್ಷೇತ್ರದಿಂದ ಆಶೀರ್ವಾದ ಲಭಿಸಿರುವುದು ಸ್ವಾಗತಾರ್ಹ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ತಂದೆಯ ಕಾಲದಿಂದಲೂ ನಾವು ಧಾರ್ಮಿಕವಾಗಿ ಬೆಳೆಯುತ್ತಾ ಬಂದಿದ್ದೇವೆ. ಇವತ್ತು ಸ್ಥಾನಮಾನ ಲಭಿಸಿರುವುದು ಜನರ ಆಶೀರ್ವಾದ, ಧರ್ಮಕ್ಷೇತ್ರ ಧರ್ಮಾಧಿಕಾರಿಯವರ ಆಶೀರ್ವಾದ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.