ಬೆಳಗಾವಿ: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಬೆಳಗಾವಿ ನಗರದಲ್ಲಿ ಎರಡು ದಿನಗಳಲ್ಲಿ ಏಳು ಮನೆಗಳು ಬಿದ್ದಿವೆ. ಅದೃಷ್ಟವಶಾತ್ ತಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇಲ್ಲಿನ ಕಾಕತಿವೇಸ್‌ನಲ್ಲಿ ಇರುವ ಹಳೆಯ ಮನೆ ಶುಕ್ರವಾರ ಸಂಜೆ ಸಂಪೂರ್ಣ ಕುಸಿದು ಬಿದ್ದಿದೆ. ಪರಶುರಾಮ ಕಾಂಬಳೆ ಎಂಬುವರು ಕುಟುಂಬ ಸಮೇತ ಈ ಮನೆಯಲ್ಲಿದ್ದರು. ಮೂರು ದಿನಗಳಿಂದ ಕುಟುಂಬದವರು ಗೋಕಾಕಕ್ಕೆ ಮಹಾಲಕ್ಷ್ಮಿ ದೇವಿ ಜಾತ್ರೆಗೆ ತೆರಳಿದ್ದರು. ಅದೇ ವೇಳೆ ಮಣೆ ಬಿದ್ದಿದ್ದರಿಂದ ಸಂಭವನೀಯ ಅನಾಹುತ ತಪ್ಪಿದೆ. ಇದರಿಂದ ₹2.40 ಲಕ್ಷ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಅಲ್ಲದೇ, ಚವಾಟ ಗಲ್ಲಿ ಹಾಗೂ ಪಾಟೀಲ ಮಾಳದಲ್ಲಿಯೂ ಎರಡು ದಿನಗಳು ಸಂಪೂರ್ಣ ಕುಸಿದಿವೆ. ಬೇರೆ ಬೇರೆ ಕಡೆ ಇತರ ನಾಲ್ಕು ಮನೆಗಳು ಭಾಗಶಃ ಬಿದ್ದಿವೆ ಎಂದು ತಹಶೀಲ್ದಾರ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.