
ಪ್ರಜಾವಾಣಿ ವಾರ್ತೆ
ಶಿರಸಂಗಿ: ‘ಜೀವನದಲ್ಲಿ ಪ್ರತಿ ವಿದ್ಯಾರ್ಥಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡರೆ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದು’ ಎಂದು ಮುಖ್ಯಶಿಕ್ಷಕ ಆರ್.ಸಿ. ರಾಠೋಡ ಹೇಳಿದರು.
ಸಮೀಪದ ಕಗದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ‘ಸಂಭ್ರಮದ ಶನಿವಾರ’ ಕಾರ್ಯಕ್ರಮದಲ್ಲಿ ‘ಆರೋಗ್ಯಕರ ಜೀವನಶೈಲಿ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಹೂಲಿಕಟ್ಟಿ ಸಿಆರ್‌ಸಿ ಕುಂಬಾರ, ಸಂತೋಷ ನಿಂಗರಡ್ಡಿ, ಬಿ.ಎಚ್.ನದಾಫ್, ಬಿ.ಜಿ.ಪಾಟೀಲ, ಎಸ್.ವಿ.ಶೆಟ್ಟರ್, ಎಚ್.ಎನ್.ಯಡ್ರಾಂವಿ, ಡಿ.ಸಿ.ಕೊಡ್ಲಿ, ಜೋತೆನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.