ADVERTISEMENT

ಕಾಗವಾಡ: ಜ.14ರಿಂದ ಸಿದ್ಧೇಶ್ವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:25 IST
Last Updated 11 ಜನವರಿ 2025, 14:25 IST
ಐನಾಪೂರ ಗ್ರಾಮದ ಸಿದ್ಧೇಶ್ವರ ದೇವರು
ಐನಾಪೂರ ಗ್ರಾಮದ ಸಿದ್ಧೇಶ್ವರ ದೇವರು   

ಕಾಗವಾಡ: ಐನಾಪೂರ ಪಟ್ಟಣದ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಜ.14ರಿಂದ 18ರವರೆಗೆ ನಡೆಯಲಿದೆ.

ಜಾತ್ರಾ ಮಹೋತ್ಸವ ಅಂಗವಾಗಿ ದನಗಳ ಜಾತ್ರೆ ಹಾಗೂ ಬೃಹತ್ ಕೃಷಿ ಪ್ರದರ್ಶನ ಕಾರ್ಯಕ್ರಮ ನೆರವೇರಲಿದೆ. ಜ.15ರಂದು ಶ್ವಾನ ಪ್ರದರ್ಶನ, ಜೋಡು ಕುದುರೆಗಳ ಗಾಡಿ ಶರತ್ತು, ಜ.16ರಂದು ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆ ಹಾಗೂ 17ರಂದು ಒಂದು ಕುದುರೆ, ಒಂದು ಎತ್ತಿನ ಗಾಡಿ ಶರತ್ತು, 18ರಂದು ಜೋಡು ಎತ್ತಿನ ಗಾಡಿ ಶರತ್ತು ಹಮ್ಮಿಕೊಳ್ಳಲಾಗಿದೆ.

ಐದು ದಿನ ಜರುಗುವ ಜಾತ್ರಾ ಮಹೋತ್ಸವದಲ್ಲಿ ಹೊರರಾಜ್ಯದ ಭಕ್ತರೂ ಪಾಲ್ಗೊಳ್ಳಲಿದ್ದಾರೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.