ADVERTISEMENT

ಎರಡು ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟಬಲ್ ಟ್ರಸ್ಟ್‌ನಿಂದ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 6:30 IST
Last Updated 17 ನವೆಂಬರ್ 2022, 6:30 IST
ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ರಾಜೇಶ್ವರಿ ವಿಶ್ವನಾಥ್ ಕತ್ತಿ ಚಾರಿಟಬಲ್ ಟ್ರಸ್ಟ್‌ನಿಂದ ನಿರ್ಮಿಸಲಾದ ಡಿಜಿಟಲ್ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ಯಮಿ ಪೃಥ್ವಿ ಕತ್ತಿ, ಬಾಗೇವಾಡಿ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಅವರನ್ನು ಸತ್ಕರಿಸಲಾಯಿತು
ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ರಾಜೇಶ್ವರಿ ವಿಶ್ವನಾಥ್ ಕತ್ತಿ ಚಾರಿಟಬಲ್ ಟ್ರಸ್ಟ್‌ನಿಂದ ನಿರ್ಮಿಸಲಾದ ಡಿಜಿಟಲ್ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ಯಮಿ ಪೃಥ್ವಿ ಕತ್ತಿ, ಬಾಗೇವಾಡಿ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಅವರನ್ನು ಸತ್ಕರಿಸಲಾಯಿತು   

ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ನಿರ್ಮಿಸಿರುವ ಡಿಜಿಟಲ್‌ ಕೊಠಡಿಗಳನ್ನು (ಸ್ಮಾರ್ಟ್‌ ಕ್ಲಾಸ್‌) ಬಾಗೇವಾಡಿ ಬ್ಯಾಂಕ್‌ ಅಧ್ಯಕ್ಷ, ಪವನ ಕತ್ತಿ ಹಾಗೂ ಉದ್ಯಮಿ ಪೃಥ್ವಿ ಕತ್ತಿ ಜಂಟಿಯಾಗಿ ಉದ್ಘಾಟಿಸಿದರು.

ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟಬಲ್ ಟ್ರಸ್ಟ್‌ನಿಂದ ₹12 ಲಕ್ಷ ವೆಚ್ಚದಲ್ಲಿ ಈ ಸ್ಮಾರ್ಟ್‌ ಕ್ಲಾಸ್‌ಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಶಾಲೆಗಳು ಡಿಜಿಟಲ್ ಸ್ವರೂಪ ಪಡೆಯುವಂತಾಗಿದೆ ಎಂದರು. ಹೆಣ್ಣುಮಕ್ಕಳ ಶಾಲೆಯ ಸ್ಮಾರ್ಟ್‌ ಕ್ಲಾಸ್‌ 50 ವಿದ್ಯಾರ್ಥಿನಿಯರು ಮತ್ತು ಗಂಡುಮಕ್ಕಳ ಶಾಲೆಯ ಸ್ಮಾರ್ಟ್‌ ಕ್ಲಾಸ್‌ನಲ್ಲಿ 28 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಇದೆ.

ನಂತರ ಮಕ್ಕಳ ದಿನಾಚರಣೆ ಅಂಗವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪವನ ಕತ್ತಿ ಹಾಗೂ ಪೃಥ್ವಿ ಕತ್ತಿ ಮಾತನಾಡಿದರು.

ADVERTISEMENT

ಚಿಕ್ಕೋಡಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ರಾಮ ಲೋಕಣ್ಣವರ್ ಮಾತನಾಡಿ,ದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಮಾಹೂರಕರ, ಹಿರಿಯ ಸದಸ್ಯ ಸಿದ್ದಲಿಂಗಯ್ಯ ಕಡಹಟ್ಟಿ, ಬಿಆರ್‌ಸಿ ಎ.ಬಿ ಪದ್ಮಣ್ಣವರ್, ಆರ್‌ಎಫ್‌ಒ ಮಹಾಂತೇಶ ಸಜ್ಜನ್, ಶಿಕ್ಷಣ ಸಂಯೋಜಕ ಪ್ರೀತಂ ನಿಡಸೋಸಿ, ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್ ಮುಗಳಿ, ಉಪಾಧ್ಯಕ್ಷ ನಿಂಗಪ್ಪ ಮಾಳಗಿ, ಸರ್ವ ಸದಸ್ಯರು, ಪ್ರಾಥಮಿಕ ಶಾಲಾ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಸ್.ದೇವರಮನಿ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಚಿಕ್ಕಮಠ, ಎಚ್.ಎಲ್.ಪೂಜೇರಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್‌.ಬಿ.ಗಿಜವಣಿ, ಎನ್.ಬಿ.ತೇರದಾಳ್, ಎಸ್.ಆರ್.ಖಾನಾಪುರೆ, ವಿ.ಎಂ.ನಾಯಕ್, ಎಂ.ಬಿ.ಮೆಳವಂಕಿ, ಗುತ್ತಿಗೆದಾರ ಸಿದ್ದು ಗಡಕರಿ, ಎಸ್.ಎನ್.ರಕ್ಷಾಗೋಳ, ಎರಡೂ ಶಾಲೆಗಳ ಶಿಕ್ಷಕರು ಇದ್ದರು.

ಪಾರ್ವತಿ ಸುಣ್ಣದಕುಂಪಿ ಪ್ರಾರ್ಥಿಸಿದರು. ಮುಖ್ಯಶಿಕ್ಷಕರಾದ ಕೆ.ಸಿ.ಮುಚಖಂಡಿ ಸ್ವಾಗತಿಸಿದರು. ಶಿಕ್ಷಕ ಅನಿಲ್ ಹಂಜಿ, ಶಿಕ್ಷಕಿ ಶೋಭಾ ಚೌಗಲಾ ನಿರೂಪಿಸಿದರು. ಪಿ.ಜಿ.ರಾಯ್ಕರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.