ADVERTISEMENT

ಬೆಳಗಾವಿ: ಅ‍ಪಘಾತದಲ್ಲಿ ಯೋಧ ಸಾವು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:32 IST
Last Updated 4 ಫೆಬ್ರುವರಿ 2026, 7:32 IST
ಜಗದೀಶ ಮನೋಹರ ಶಿಂಧೆ
ಜಗದೀಶ ಮನೋಹರ ಶಿಂಧೆ   

ಬೆಳಗಾವಿ: ಪಂಜಾಬಿನ ಬಟಿಂದಾ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ತಾಲ್ಲೂಕಿನ ಕಂಗ್ರಾಳಿ ಕೆ.ಎಚ್‌. ಗ್ರಾಮದ ಯೋಧ ಹವಾಲ್ದಾರ ಜಗದೀಶ ಮನೋಹರ ಶಿಂಧೆ (40) ಮೃತಪಟ್ಟಿದ್ದು, ಪಾರ್ಥಿವ ಶರೀರವನ್ನು ಬುಧವಾರ ಸ್ವಗ್ರಾಮಕ್ಕೆ  ತರಲಾಗುವುದು.

ಕಳೆದ 24 ವರ್ಷಗಳಿಂದ ಸೇವೆಯಲ್ಲಿದ್ದ ಯೋಧ ಜಗದೀಶ, ಇನ್ನು 4 ತಿಂಗಳಿಗೆ ಸೇವೆಯಿಂದ ನಿವೃತ್ತರಾಗುವವರಿದ್ದರು. ಪತ್ನಿ ಮತ್ತು ಇಬ್ಬರು ಪುತ್ರರು ಜಗದೀಶ ಅವರ ಜತೆಗೆ ಪಂಜಾಬದಲ್ಲಿ ವಾಸಿಸಿದ್ದರು. ಯೋಧನಿಗೆ ತಂದೆ, ತಾಯಿ, ಸೋದರ, ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT