ADVERTISEMENT

ಪ್ರಥಮ ಭಾಷೆಗೆ 481 ವಿದ್ಯಾರ್ಥಿಗಳು ಗೈರು ಹಾಜರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 15:30 IST
Last Updated 22 ಸೆಪ್ಟೆಂಬರ್ 2020, 15:30 IST

ಬೆಳಗಾವಿ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ 2ನೇ ದಿನವಾದ ಮಂಗಳವಾರ ಪ್ರಥಮ ಭಾಷೆ ವಿಷಯದ ಪರೀಕ್ಷೆ ನಡೆಯಿತು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಾಯಿಸಿದ್ದ 2,700 ಮಂದಿಯಲ್ಲಿ 2,540 ವಿದ್ಯಾರ್ಥಿಗಳು ಹಾಜರಾದರು. 160 ಮಂದಿ ಗೈರು ಹಾಜರಾದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4,005 ಮಕ್ಕಳು ನೋಂದಾಯಿಸಿದ್ದರು. ಇವರಲ್ಲಿ 3,684 ಮಂದಿ ಹಾಜರಾದರು. 321 ವಿದ್ಯಾರ್ಥಿಗಳು ಗೈರು ಹಾಜರಾದರು. ಯಾರೂ ಡಿಬಾರ್‌ ಆಗಿಲ್ಲ ಎಂದು ಡಿಡಿಪಿಐಗಳಾದ ಎ.ಬಿ. ಪುಂಡಲೀಕ ಹಾಗೂ ಗಜಾನನ ಮನ್ನಿಕೇರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.