ADVERTISEMENT

ಸ್ಟಾರ್‌ ಏರ್‌‌ನಿಂದ ವಾರದ ಏಳೂ ದಿನ ಬೆಳಗಾವಿ–ಮುಂಬೈ ವಿಮಾನಯಾನ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2023, 11:26 IST
Last Updated 15 ಅಕ್ಟೋಬರ್ 2023, 11:26 IST
   

ಬೆಳಗಾವಿ: ಸ್ಟಾರ್‌ ಏರ್‌ ಸಂಸ್ಥೆಯು ಬೆಳಗಾವಿ–ಮುಂಬೈ ಮಾರ್ಗದಲ್ಲಿ ಹೆಚ್ಚುವರಿಯಾಗಿ ಆರಂಭಿಸಿದ ವಿಮಾನಯಾನ ಸೇವೆಗೆ ಭಾನುವಾರ ಚಾಲನೆ ನೀಡಲಾಯಿತು.

‘ಈ ಹಿಂದೆ ವಾರದಲ್ಲಿ ನಾಲ್ಕು ದಿನ(ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ) ಬೆಳಗಾವಿ–ಮುಂಬೈ ಮಾರ್ಗದಲ್ಲಿ ಸ್ಟಾರ್‌ ಏರ್‌ ಸಂಸ್ಥೆ ವಿಮಾನ ಸಂಚರಿಸುತ್ತಿತ್ತು. ಈಗ ಹೆಚ್ಚುವರಿಯಾಗಿ ಮೂರು ದಿನ(ಭಾನುವಾರ, ಸೋಮವಾರ ಮತ್ತು ಶುಕ್ರವಾರ) ಸಂಚರಿಸಲಿದ್ದು, ವಾರದ ಏಳೂ ದಿನ ಪ್ರಯಾಣಿಕರು ಸಂಚರಿಸಬಹುದು’ ಎಂದು ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ಎಸ್‌.ತ್ಯಾಗರಾಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಬೈನಿಂದ ಮಧ್ಯಾಹ್ನ 12.15ಕ್ಕೆ ಹೊರಡಲಿರುವ ವಿಮಾನ 1.25ಕ್ಕೆ ಬೆಳಗಾವಿ ತಲುಪಲಿದೆ. ಇಲ್ಲಿಂದ 1.55ಕ್ಕೆ ಹೊರಡಲಿರುವ ವಿಮಾನ 3.10ಕ್ಕೆ ಮುಂಬೈ ತಲುಪಲಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.