ರಾಮದುರ್ಗ: ಪಟ್ಟಣದ ಅಂಬೇಡ್ಕರ್ ನಗರದ ದಲಿತ ಸಮಾಜದವರು ನಿರ್ಮಿಸಿದ ದುರಗಮ್ಮ ಮತ್ತು ಮರಗಮ್ಮ ನೂತನ ಮೂರ್ತಿಗಳನ್ನು ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆಯಲ್ಲಿ ಬರಮಾಡಿಕೊಂಡರು.
ಮರಗಮ್ಮ, ದುರಗಮ್ಮ ಮೂರ್ತಿಗಳನ್ನು ಸಂಗಳದ ದ್ಯಾಮಣ್ಣ ಕಲಾಕಾರ ಸುಮಾರು ಒಂದು ತಿಂಗಳಿಂದಲೂ ನಿರಂತರ ಶ್ರಮಿಸಿ ಕೆತ್ತಿದ್ದಾರೆ. ವೆಂಕಟೇಶ್ವರ ದೇವಸ್ಥಾನದಿಂದ ಅಲಂಕೃತ ಟ್ರ್ಯಾಕ್ಟರ್ ಮೂಲಕ ತೇರಬಜಾರ್, ಜುನಿಪೇಠ, ಅಂಬೇಡ್ಕರ್ ಬೀದಿ, ಹಳೇ ಬಸ್ ನಿಲ್ದಾಣ, ಮಿನಿವಿಧಾನಸೌಧ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ಮಂಗಳವಾರ ಬೆಳಿಗ್ಗೆ ನೂತನ ಮೂರ್ತಿಗಳಿಗೆ ವಿಶೇಷ ಪೂಜೆ, ಪುನಸ್ಕಾರಗಳು ಜರುಗಿದವು. ಹಾಲು, ತುಪ್ಪದ ಅಭಿಷೇಕ ಜರುಗಿತು. ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು.
ಮುಳ್ಳೂರು ಅನ್ನದಾನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ನಗರದ ದೇವಸ್ಥಾನಕ್ಕೆ ಮಹಾದ್ವಾರದ ಅಗತ್ಯ ಇದೆ. ಇದರ ನಿರ್ಮಾಣಕ್ಕೆ ಶ್ರೀಮಠದಿಂದ ಒಂದು ಸಾವಿರ ದೇಣಿಗೆ ನೀಡಿ ಮುಂದಿನ ವರ್ಷಕ್ಕೆ ಉದ್ಘಾಟನೆಯಾಗಲಿ ಎಂದು ಹರಿಸಿದರು.
ಇಲ್ಲಿನ ಮಳೆರಾಜ ಮಠದ ಮಳೆಯಪ್ಪ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳು, ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.