
ಹಂದಿಗುಂದ: ‘ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ಸೋಲು, ಗೆಲುವು ಸಮನಾಗಿ ಸ್ವೀಕರಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಳಗಾವಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿನಗುಂಡಿ ಹೇಳಿದರು.
ಗ್ರಾಮದ ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಪ್ರಯುಕ್ತ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ಸಮೀರವಾಡಿಯ ಸಕ್ಕರೆ ಕಾರ್ಖಾನೆ ಮಹಾಪ್ರಬಂಧಕ ಪಿ.ಸಿ.ಬಾಗೇವಾಡಿ, ‘ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಿಂದ ದೂರವುಳಿದು ಆಟಗಳಲ್ಲಿ ತೊಡಗಬೇಕು’ ಎಂದರು.
ಅರುಣೋದಯ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಶಂಕರಗೌಡ ಪಾಟೀಲ, ಎ.ಕೆ.ಮೇಗಾಡೆ, ಎಚ್.ಟಿ.ನಾವಿ, ರಮೇಶ ಮಂಟೂರ, ಎಂ.ಎಂ.ಅಂದಾನಿ, ಸಿದ್ದಪ್ಪ ಪೂಜಾರಿ, ಶಿವಲಿಂಗಪ್ಪ ಉಳ್ಳಾಗಡ್ಡಿ, ಲಕ್ಷ್ಮಣ ಬಿರಾಜ, ತುಕಾರಾಮ ಮಂಟೂರ, ಎನ್.ಡಿ.ಜಾಧವ, ರಾಮಕೃಷ್ಣ ಬನಾಜ, ಸಿ.ಎಸ್.ಹಿರೇಮಠ ಇದ್ದರು. ಶಾಂತಕುಮಾರ ಬೆಳ್ಳಿಕಟ್ಟಿ ಸ್ವಾಗತಿಸಿದರು. ವೈ.ಎಸ್.ಜಕನೂರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.