
ಮೂಡಲಗಿ: ಅಪಾಯಕಾರಿಯಾದ ಪೈಲೋರಿಕ್ ಸ್ಪೆನೋಸಿಸ್ ತೊಂದರೆಯಿಂದ ಬಳಲುತ್ತಿದ್ದ ಒಂದು ತಿಂಗಳ ಹಸುಳೆಗೆ ಮೂಡಲಗಿಯ ಪಾಟೀಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ಮಾಡಿ ಯಶಸ್ಸಿಯಾಗಿದೆ.
ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಮಾರುತಿ ಮೇದಾರ್, ಡಾ.ಸಂಜು ತೇಲಿ, ಡಾ. ವಿಶಾಲ್ ಪಾಟೀಲ, ಡಾ.ಪದ್ಮಾ ಪಾಟೀಲ ಮತ್ತು ಅವರ ವೈದ್ಯಕೀಯ ತಂಡವು ಯಶಸ್ವಿಯಾಗಿ ನೆರವೇರಿಸಿದೆ. ಸದ್ಯ ಮಗು ಪೂರ್ಣ ಚೇತರಿಸಿಕೊಂಡಿದ್ದು ಹಾಲು ಸೇವಿಸುತ್ತಿದೆ.
ಶಿಶುವಿನ ಜೀರ್ಣಾಂಗ ವ್ಯವಸ್ಥೆಯಲ್ಲಿ ಹೊಟ್ಟೆ ಮತ್ತು ಸಣ್ಣ ಕರುಳು ಸೇರುವ ಜಾಗದಲ್ಲಿ ಪೈಲೋರಸ್ ಎಂಬ ಸ್ನಾಯುವಿನ ಕವಾಟವಿದ್ದು, ಇದು ಆಹಾರವು ಹೊಟ್ಟೆಯಿಂದ ಕರುಳಿಗೆ ಹೋಗುವುದನ್ನು ನಿಯಂತ್ರಿಸುತ್ತದೆ. ಕೆಲವು ಶಿಶುಗಳಲ್ಲಿ ಈ ಸ್ನಾಯು ಅಸಹಜವಾಗಿ ದಪ್ಪವಾಗಿ, ಹಾದಿಯನ್ನು ಕಿರಿದಾಗುವುದರಿಂದ ಆಹಾರ ಅಥವಾ ಹಾಲು ಕರುಳಿಗೆ ಹೋಗಲು ಸಾಧ್ಯವಾಗದೆ, ವಾಂತಿಯ ರೂಪದಲ್ಲಿ ಜೋರಾಗಿ ಚಿಮ್ಮುತ್ತದೆ. ಇಂಥ ಪೈಲೋರಿಕ್ ಸ್ಪೆನೋಸಿಸ್ ಮಕ್ಕಳಲ್ಲಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂರ್ಪಕಿಸಬೇಕು ಎಂದು ಡಾ.ವಿಶಾಲ್ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.