ADVERTISEMENT

ಕೆಎಲ್ಇ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 15:30 IST
Last Updated 3 ಡಿಸೆಂಬರ್ 2021, 15:30 IST

ಬೆಳಗಾವಿ: ನಗರದ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ವೈದ್ಯರು ಗರ್ಭಾಶಯದ ಗಂಟುಗಳ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಇಲ್ಲಿನ ಶಹಾಪುರದ 42 ವರ್ಷದ ಮಹಿಳೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ತಪಾಸಣೆ ನಡೆಸಿದಾಗ, ಗರ್ಭಾಶಯಕ್ಕೆ ಅಂಟಿಕೊಂಡು 980 ಗ್ರಾಂ. ತೂಕದ ಆರು ಗಂಟುಗಳು (ಪೈಬ್ರೈಡ್) ಇರುವುದು ಕಂಡುಬಂತು. ಸ್ತ್ರೀರೋಗ ತಜ್ಞ ಡಾ.ಸತೀಶ ಧಾಮಣಕರ ನೇತೃತ್ವದಲ್ಲಿ ಡಾ.ವಿಕಾಸ ಗಣೇಶವಾಡಿ, ಡಾ.ಮಹಾನ್, ಡಾ.ಅರುಣ ಮಳಗೇರ ಹಾಗೂ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿತು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

‘ಅನುವಂಶೀಯತೆ, ಹಾರ್ಮೋನುಗಳಲ್ಲಿನ ಬದಲಾವಣೆ, ಆಹಾರ ಕ್ರಮದ ಏರಿಳಿತಗಳು, ಆರೋಗ್ಯದ ಬಗ್ಗೆ ನಿಷ್ಕಾಳಜಿ ಮತ್ತಿತರ ಕಾರಣಗಳಿಂದ ಮಹಿಳೆಯರು ಇಂತಹ ಸಮಸ್ಯೆಗೆ ಗುರಿಯಾಗುತ್ತಾರೆ. ಸಕಾಲಕ್ಕೆ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆದರೆ ಆರೋಗ್ಯಯುತ ಜೀವನ ನಡೆಸಬಹುದು’ ಎಂದು ಧಾಮಣಕರ ತಿಳಿಸಿದ್ದಾರೆ.

ADVERTISEMENT

‘ಪ್ರತಿ 1 ಸಾವಿರ ಮಹಿಳೆಯರಲ್ಲಿ 20-30 ಮಂದಿಗೆ ಇಂತಹ ಲಕ್ಷಣ ಕಾಣಿಸುತ್ತವೆ. ತ್ವರಿತ ಚಿಕಿತ್ಸೆ ಅಗತ್ಯ’ ಎಂದು ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಹೇಳಿದ್ದಾರೆ.

ತಂಡವನ್ನು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಯುಎಸ್ಎಂ ಕೆಎಲ್ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.