
ಬೆಳಗಾವಿಯಲ್ಲಿ ನಡೆದ ರಾಜ್ಯೋತ್ಸವ, ವಚನೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮದಲ್ಲಿ ಮಂಗಲ ಮೆಟಗುಡ್ಡ, ಚಲನಚಿತ್ರ ನಟಿ ಸುಧಾ ಬೆಳವಾಡಿ
ಬೆಳಗಾವಿ: ‘ರಾಜ್ಯದಲ್ಲಿ ಕನ್ನಡ ಭಾಷೆ ತನ್ನದೇ ಆದ ಗೌರವ, ಮೌಲ್ಯ ಹೊಂದಿದೆ. ಇಂತಹ ಕನ್ನಡವನ್ನು ಉಳಿಸಿ, ಬೆಳೆಸುವುದು ಪ್ರತಿ ಕನ್ನಡಿಗರ ಕರ್ತವ್ಯ. ಕನ್ನಡ ಪ್ರೇಮ ನಿರಂತರವಾಗಿ ಇರಬೇಕು’ ಎಂದು ಕಿರುತೆರೆ ಮತ್ತು ಚಲನಚಿತ್ರ ನಟಿ ಸುಧಾ ಬೆಳವಾಡಿ ಹೇಳಿದರು.
ನಗರದ ನೆಹರೂ ನಗರ ಕನ್ನಡ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜ ಹಾಗೂ ಕನ್ನಡ ಭವನ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ‘ಉತ್ಸವ’ ಕನ್ನಡ ರಾಜ್ಯೋತ್ಸವ, ವಚನೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಹಿತ್ಯ ಸಮ್ಮೇಳನಗಳು, ರಾಜ್ಯೋತ್ಸವ ಜನರ ನಡುವೆ ಪ್ರೀತಿ, ಬಾಂಧವ್ಯ, ಸಾಮರಸ್ಯ ಬೆರೆಸುವಂತಹ ಸಂಪರ್ಕ ಕೊಂಡಿಯಾಗಿದೆ. ಕನ್ನಡದ ಜಾತ್ರೆಯು ನಿರಂತರವಾಗಿ ನಡೆಯಲಿ. ಬೆಳಗಾವಿಯಲ್ಲಿ ಅಖಿಲ ಕನ್ನಡದ ಸಾಹಿತ್ಯ ಸಮ್ಮೇಳನ ಸೇರಿದಂತೆ ನೂರಾರು ಕನ್ನಡ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗೆ ಕನ್ನಡದ ಕಂಪು ವಿಶ್ವದಾದ್ಯಂತ ಪಸರಿಸುವ ಕೆಲಸವಾಗಬೇಕು’ ಎಂದರು
ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಶೈಲಜಾ ಬಿಂಗೆ, ಕ.ಸಾ.ಪ ಅಧ್ಯಕ್ಷೆ ಮಂಗಲ ಮೆಟಗುಡ್ಡ, ಚಿಕ್ಕೋಡಿ ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ, ಲಿಂಗಾಯತ ಮಹಿಳಾ ಸಮಾಜ ಅಧ್ಯಕ್ಷೆ ಮಧುಮತಿ ಹಿರೇಮಠ, ಕಾರ್ಯದರ್ಶಿ ರಕ್ಷಾ ದೇಗಿನಾಳ, ಸಹ ಕಾರ್ಯದರ್ಶಿ ಸರೋಜಾ ನಿಶಾನದಾ, ಲಿಂಗಾಯತ ಮಹಿಳಾ ಸಮಾಜ ಸಂಘದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.