ADVERTISEMENT

ಹಿರೇಬಾಗೇವಾಡಿ: ಸಕ್ಕರೆ ಕಾರ್ಖಾನೆ ಉಳಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 1:40 IST
Last Updated 25 ಸೆಪ್ಟೆಂಬರ್ 2025, 1:40 IST
ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಕೆ.ಆರ್.ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿದರು
ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಕೆ.ಆರ್.ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿದರು   

ಹಿರೇಬಾಗೇವಾಡಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ‘ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಅಭಿವೃದ್ಧಿ ಪೆನೆಲ್’ ನ ಪ್ರಚಾರ ಕಾರ್ಯಕ್ರಮಕ್ಕೆ ಬುಧವಾರ ಹಿರೇಬಾಗೇವಾಡಿಯ ಬಸವ ವೃತ್ತದ ಬಳಿ ಕೆ.ಆರ್.ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ, ಸಕ್ಕರೆ ಕಾರ್ಖಾನೆಯ ಅಳಿವು-ಉಳಿವು ಕಾರ್ಖಾನೆಯ ಷೇರುದಾರರ ಕೈಯಲ್ಲಿದೆ. ಸಹಕಾರ ಮತ್ತು ಸರ್ಕಾರಿ ಕಾರ್ಖಾನೆಗಳನ್ನು ಭ್ರಷ್ಟರು ಹಾಳು ಮಾಡಿ ನಷ್ಟದಲ್ಲಿ ಮುಳುಗಿಸುತ್ತಿದ್ದಾರೆ. ಷೇರುದಾರರನ್ನು ನಂಬಿಸಿ ಮೋಸ ಮಾಡಲಾಗುತ್ತಿದೆ. ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಅಭಿವೃದ್ಧಿ ಪೆನೆಲ್‌ಗೆ ಮತ ನೀಡಿ ಕಾರ್ಖಾನೆಯನ್ನು ಉಳಿಸಬೇಕೆಂದರು.

ಬಸವರಾಜ ಮೊಖಾಶಿ, ಬೀರಪ್ಪ ದೇಶನೂರ, ಸಿದ್ದಪ್ಪ ಹುಕ್ಕೇರಿ, ಬಸನಗೌಡ ಪಾಟೀಲ, ಆನಂದ ಹುಚ್ಚಗೌಡ್ರ, ನಿಂಗಪ್ಪ ಹಣಜಿ, ಬಸವರಾಜ ತುರಮರಿ, ಮಹಾದೇವ ಸಾಗರೇಕರ, ಮೀನಾಕ್ಷಿ ನೆಲಗಲಿ, ಬಸಪ್ಪ ವಾಲಿ, ಬಸಪ್ಪ ರಾಜಣ್ಣವರ, ರಾಜು ಅರಳೀಕಟ್ಟಿ, ಮಲ್ಲಿಕಾರ್ಜುನ ಘಟಿಗೆಣ್ಣವರ, ಬಸವರಾಜ ಅರಳೀಕಟ್ಟಿ, ಶೋಭಾ ಹುಲಮನಿ, ಸಂಜೀವಕುಮಾರ ತಿಲಗರ, ಪ್ರೇಮ್ ಚೌಗಲಾ, ರವಿ ಪಾರ್ವತಿ ಸೇರಿದಂತೆ ಸುತ್ತಲಿನ ಗ್ರಾಮಗಳ ಷೇರುದಾರರು, ಪ್ಯಾನೆಲ್‌ ಸದಸ್ಯರು, ರೈತರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.