ADVERTISEMENT

ನಿಪ್ಪಾಣಿ | ಕಬ್ಬಿನ ಬಿಲ್ ₹8.25 ಕೋಟಿ ರೈತರ ಖಾತೆಗಳಿಗೆ ಜಮಾ: ಮಲಗೊಂಡಾ ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 15:32 IST
Last Updated 12 ನವೆಂಬರ್ 2023, 15:32 IST
ಮಲಗೊಂಡಾ ಪಾಟೀಲ
ಮಲಗೊಂಡಾ ಪಾಟೀಲ   

ನಿಪ್ಪಾಣಿ: ‘ಅ.27 ರಿಂದ 31ರವರೆಗಿನ ಪ್ರಥಮ ಪಾಕ್ಷಿಕ ಅವಧಿಯಲ್ಲಿ ನುರಿಸಿದ 27,505 ಟನ್‌ ಕಬ್ಬಿನ ಬೆಲೆ ಮೊತ್ತ ₹8.25 ಕೋಟಿ ಬಿಡುಗಡೆ ಮಾಡಲಾಗಿದ್ದು ಕಬ್ಬಿನ ಬಿಲ್‌ ಅನ್ನು ಸಂಬಂಧಪಟ್ಟ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗಿದೆ’ ಎಂದು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ(ಬಹುರಾಜ್ಯ)ಯ ಅಧ್ಯಕ್ಷ ಮಲಗೊಂಡಾ ಪಾಟೀಲ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರ ಮಾರ್ಗದರ್ಶನದಲ್ಲ  2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಅ.27 ರಂದು ಆರಂಭಿಸಲಾಗಿದ್ದು, ಪ್ರತಿ ಟನ್‌ ಕಬ್ಬಿಗೆ ₹3 ಸಾವಿರದಂತೆ ಕಬ್ಬಿಗೆ ಬೆಲೆ ಘೋಷಿಸಲಾಗಿದೆ. ಇನ್ನು ಮುಂದೆ ಸಹ ನುರಿಸಲಾಗುವ ಕಬ್ಬು ಬಿಲ್‌ನ ಮೊತ್ತವನ್ನು ಸಕಾಲದಲ್ಲಿ ಸಂಬಂಧಪಟ್ಟ ಕಬ್ಬು ಪೂರೈಸಿದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು’ ಎಂದು ಹೇಳಿದ್ದಾರೆ.

‘ಈ ಹಂಗಾಮಿನಲ್ಲಿ ಇಲ್ಲಿಯವರೆಗೆ ಒಂದು ಲಕ್ಷ ಟನ್‍ಗೂ ಅಧಿಕ ಕಬ್ಬು ನುರಿಸಲಾಗಿದೆ.  ಎಲ್ಲ ಕಬ್ಬು ಬೆಳೆಗಾರ ಸದಸ್ಯರು ಮತ್ತು ರೈತರು ತಮ್ಮ ಕಬ್ಬನ್ನು ನಮ್ಮ ಕಾರ್ಖಾನೆಗೆ ಕ ಕೊಟ್ಟು ಸಹಕರಿಸಬೇಕು’ ಎಂದು ವಿನಂತಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.