ADVERTISEMENT

ಮೂಡಲಗಿ: ನದಿ ನೀರಿನಲ್ಲಿ ಕಬ್ಬಿನ ಬೆಳೆ 

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:08 IST
Last Updated 25 ಜುಲೈ 2024, 14:08 IST
ಮೂಡಲಗಿ ತಾಲ್ಲೂಕಿನ ಅವರಾದಿಯ ಬಳಿಯಲ್ಲಿ ಘಟಪ್ರಭಾ ನದಿಯ ನೀರಿನಲ್ಲಿ ಕಬ್ಬಿನ ಬೆಳೆ ಮುಳುಗಿದೆ
ಮೂಡಲಗಿ ತಾಲ್ಲೂಕಿನ ಅವರಾದಿಯ ಬಳಿಯಲ್ಲಿ ಘಟಪ್ರಭಾ ನದಿಯ ನೀರಿನಲ್ಲಿ ಕಬ್ಬಿನ ಬೆಳೆ ಮುಳುಗಿದೆ   

ಮೂಡಲಗಿ: ಹಿಡಕಲ್‌ ಜಲಾಶಯದಿಂದ ಘಟಪ್ರಭಾ ನದಿಗೆ ಬುಧವಾರ ಮಧ್ಯಾಹ್ನ ನೀರು ಬಿಟ್ಟಿದ್ದರಿಂದ ಗುರುವಾರ ಬೆಳಿಗ್ಗೆಯಿಂದ ತಾಲ್ಲೂಕಿನ ಮಸಗುಪ್ಪಿ, ಸುಣಧೋಳಿ, ಕಮಲದಿನ್ನಿ, ಅವರಾಧಿ, ಢವಳೇಶ್ವರ ಗ್ರಾಮಗಳ ಬಳಿಯಲ್ಲಿ ನದಿ ನೀರಿನ ಹರಿವು ವಿಸ್ತಾರಗೊಂಡು ಸಾವಿರಾರು ಎಕರೆಯಷ್ಟು ಕಬ್ಬಿನ ಬೆಳೆ ನೀರಿನಲ್ಲಿ ನಿಂತಿದೆ.

ಪ್ರವಾಹ ಭೀತಿ ಇರುವ ತೋಟಪಟ್ಟಿಗಳಲ್ಲಿ ವಾಸವಾಗಿರುವ ಜನರು ಜಾನುವಾರು ಸಹಿತಿ ಸುರಕ್ಷಿತ ಸ್ಥಳಕ್ಕೆ ಬೆಳಿಗ್ಗೆಯಿಂದ ತೆರಳುತ್ತಿದ್ದಾರೆ. ಪ್ರವಾಹ ಸಮಸ್ಯೆ ನಿರ್ವಹಣೆಗೆ ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಹಶೀಲ್ದಾರ್ ಮಹಾದೇವ ಸನ್ನಮುರೆ ‘ಪ್ರಜಾವಾಣಿ’ಗೆ ತಿಳಿಸಿದರು.

ನದಿಯ ನೀರಿನ ಹರಿವು ಇನ್ನು ಹೆಚ್ಚಾಗುವುದರಿಂದ ಪ್ರವಾಹ ಭೀತಿ ಇರುವುದರಿಂದ ಜಿಲ್ಲಾಧಿಕಾರಿ ನಿರ್ದೇಶನದಂತೆ ನದಿ ಪಾತ್ರ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಪೂರ್ವ ಸಿದ್ದತೆ ಮಾಡಿಕೊಳ್ಳಲು ಆಯಾ ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.