
ಚನ್ನಮ್ಮನ ಕಿತ್ತೂರು: ‘ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆಗೆ ಮಣಿದ ಸರ್ಕಾರವು ಟನ್ ಕಬ್ಬಿಗೆ ₹3,250 ದರ ನಿಗದಿ ಮಾಡಿದೆ. ಸರ್ಕಾರ ₹50 ಪ್ರೋತ್ಸಾಹ ಧನವಾಗಿ ನೀಡುವುದಾಗಿ ಘೋಷಿಸಿದೆ. ಈ ಬೆಲೆಯನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರೋಧಿಸುವುದು ಸರಿಯಲ್ಲ’ ಎಂದು ದೇಗುಲಹಳ್ಳಿ ಹಾಗೂ ಅಂಬಡಗಟ್ಟಿ ಗುರು ಮಡಿವಾಳೇಶ್ವರ ಮಠದ ಪೀಠಾಧಿಕಾರಿ ವೀರೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂಗಳ ಪರವಾಗಿ ಸದಾ ವಾದ ಮಂಡಿಸುತ್ತೀರಿ. ಕಬ್ಬು ಬೆಳೆಗಾರರು ಹಿಂದೂಗಳಲ್ಲವೇ. ಅವರು ನ್ಯಾಯಯುತ ಬೆಲೆ ಪಡೆಯುವುದು ಬೇಡವೇ’ ಎಂದು ಕೇಳಿದರು.
‘ಸರ್ಕಾರ ಘೋಷಿಸಿರುವ ಬೆಲೆ ನೀಡಲು ಬಹುತೇಕ ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿವೆ. ಕೆಲವರು ಟನ್ ಕಬ್ಬಿಗೆ ₹3,400 ದರ ನೀಡುವುದಾಗಿ ಘೋಷಣೆ ಮಾಡಿವೆ. ಇಂಥ ಸಂದರ್ಭದಲ್ಲಿ ನೀವು ಸುಮ್ಮನಿರುವುದು ಒಳ್ಳೆಯದು. ಈ ಬೆಲೆ ಕೊಡಲು ಆಗದಿದ್ದರೆ ನಿಮ್ಮ ಕಾರ್ಖಾನೆ ಮುಚ್ಚುವುದು ಒಳಿತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.