
ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ₹3,300 ನೀಡುವ ಕುರಿತು ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ಸ್ವಾಗತಿಸಿ, ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದರು.
ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ರೈತರ ಹಿತಾಸಕ್ತಿ ಕಾಪಾಡುವ ಹೋರಾಟಕ್ಕೆ ಸದಾ ನಮ್ಮ ಬೆಂಬಲವಿದೆ. ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ಕೊಡಿಸುವ ಹೋರಾಟದಲ್ಲೂ ನಾವು ಭಾಗಿಯಾಗಿದ್ದೇವೆ. ನಾಡು–ನುಡಿಗೆ ಧಕ್ಕೆ ಬಂದಾಗ ರೈತರು ನಮ್ಮೊಂದಿಗೆ ನಿಲ್ಲಬೇಕು. ನಾವೂ ರೈತರ ಬೆನ್ನಿಗೆ ಸದಾ ಇದ್ದೇವೆ’ ಎಂದರು.
‘ಶೇ 11.25 ರಿಕವರಿ ಹೊಂದಿದ ಕಬ್ಬಿನ ಬೆಳೆಗೆ ಮಾತ್ರ ಪ್ರತಿ ಟನ್‌ಗೆ ₹3,300 ನೀಡಿದರೆ ಸಾಲದು. ಅದಕ್ಕಿಂತ ಕಡಿಮೆ ರಿಕವರಿ ಇದ್ದರೂ, ಟನ್‌ಗೆ ₹3,300 ಕೊಡಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡಬಾರದು’ ಎಂದೂ ಮನವಿ ಮಾಡಿದರು.
ಮುಖಂಡರಾದ ಸುರೇಶ ಗವನ್ನವರ ಗಣೇಶ ರೋಕಡೆ, ಹೊಳೆಪ್ಪ ಸುಲಧಾಳ, ಸತೀಶ ಗುಡದವರ, ರಮೇಶ ಯರಗನ್ನವರ, ವಿನಾಯಕ ಹಟ್ಟಿಹೊಳಿ, ಕರಣ ಚವ್ಹಾಣ, ವಿನಾಯಕ ಭೋವಿ, ಸಂಪತ ಸಕ್ರೆನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.