ADVERTISEMENT

ಸಾಕುನಾಯಿ ಸಾವು: ಕತ್ತೆಕಿರುಬ ದಾಳಿ ಶಂಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 6:35 IST
Last Updated 29 ಸೆಪ್ಟೆಂಬರ್ 2023, 6:35 IST
ದ್ರಾಕ್ಷಿ ತೋಟದಲ್ಲಿ ಬೋನು ಇಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ
ದ್ರಾಕ್ಷಿ ತೋಟದಲ್ಲಿ ಬೋನು ಇಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ   

ರಡ್ಡೆರಹಟ್ಟಿ: ತಾಲ್ಲೂಕಿನ ರೆಡ್ಡೆರಟ್ಟಿ ಗ್ರಾಮದ ಹೊರವಲಯದಲ್ಲಿ ಅನುಮಾನಾಸ್ಪದ ಪ್ರಾಣಿಯ ದಾಳಿಯಿಂದಾಗಿ ಎರಡು ಸಾಕು ನಾಯಿಗಳು ಸಾವನ್ನಪ್ಪಿವೆ ಎಂಬ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ರಡ್ಡೇರಹಟ್ಟಿ ಗ್ರಾಮದ ಸಂಗಪ್ಪ ಜನವಾಡ ಎಂಬುವರ ಸಾಕು ನಾಯಿಯನ್ನು ಬುಧವಾರ ತಡರಾತ್ರಿ ವನ್ಯಮೃಗವೊಂದು ದೂರದ ದ್ರಾಕ್ಷಿ ತೋಟಕ್ಕೆ ಎಳೆದೊಯ್ದು ನಾಯಿಯ ರುಂಡ ಕತ್ತರಿಸಿ ಬಲಿ ತೆಗೆದುಕೊಂಡಿದೆ. ಕಾಡುಪ್ರಾಣಿಯ ಧ್ವನಿ ಕೇಳಿಬಂದಿದ್ದು, ಕತ್ತೆ ಕಿರುಬ ಇರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

ರಡ್ಡೆರಹಟ್ಟಿ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಪ್ರಶಾಂತ ಗಾಣಿಗೇರ ಭೇಟಿ ನೀಡಿ ಹೆಜ್ಜೆಗುರುತು ಕಲೆ ಹಾಕಿ ಪರಿಶೀಲನೆ ನಡೆಸಿದರು. ಈಗಾಗಲೇ ಮುಂಜಾಗ್ರತೆ ಕ್ರಮ ಕೈಗೊಂಡು ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬಿಡುಬಿಟ್ಟಿದ್ದು, ಹೆಚ್ಚುವರಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಣಿ ಹಿಡಿಯಲು ಬೋನು ಇರಿಸಲಾಗಿದೆ.

ADVERTISEMENT
(೨೮ಅಥಣಿ೨ಅ) ಅನುಮಾನಾಸ್ಪದ ಪ್ರಾಣೀಯ ಹೆಜ್ಜೆ ಗುರುತು ಪರಿಶೀಲಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.