ADVERTISEMENT

ಸ್ವಚ್ಛ ಸರ್ವೇಕ್ಷಣ 2023: ಬೈಲಹೊಂಗಲ ಪುರಸಭೆ ಸ್ವಚ್ಛತೆಯಲ್ಲಿ ಮುಂದು

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 15:41 IST
Last Updated 13 ಜನವರಿ 2024, 15:41 IST
ಮಹಾಂತೇಶ ಕೌಜಲಗಿ, ಶಾಸಕರು
ಮಹಾಂತೇಶ ಕೌಜಲಗಿ, ಶಾಸಕರು   

ಬೈಲಹೊಂಗಲ: 'ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛ ಭಾರತ್ ಮಿಷನ್ (ನಗರ) ಅಡಿಯಲ್ಲಿ ನಡೆಸಿದ ಸ್ವಚ್ಛ ಸರ್ವೇಕ್ಷಣ 2023 ರಲ್ಲಿ ಪಟ್ಟಣದ ಪುರಸಭೆಗೆ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, 'ದೇಶದ ಎಲ್ಲಾ ಪಟ್ಟಣ ಮತ್ತು ನಗರಗಳ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಬೈಲಹೊಂಗಲ ಪುರಸಭೆ ರಾಜ್ಯಕ್ಕೆ 2ನೇ ಸ್ಥಾನ ಪಡೆದರೆ, ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ದೇಶದ ದಕ್ಷಿಣ ವಿಭಾಗಗಳಾದ ಕರ್ನಾಟಕ. ಕೇರಳ. ತಮಿಳುನಾಡು. ಆಂದ್ರಪ್ರದೇಶ ತೆಲಂಗಾಣ ರಾಜ್ಯಗಳಲ್ಲಿ ಬೈಲಹೊಂಗಲ ಪುರಸಭೆಗೆ 9ನೇ ಸ್ಥಾನ ಲಭಿಸಿದೆ' ಎಂದರು.

'ಕಳೆದ ವರ್ಷದ ಸಮೀಕ್ಷೆಯಲ್ಲಿ ದೇಶದ ದಕ್ಷಿಣ ವಿಭಾಗದಲ್ಲಿ 15ನೇ ಸ್ಥಾನ ಪಡೆದಿದ್ದ ಪುರಸಭೆ ಈ ವರ್ಷ 9ನೇ ಸ್ಥಾನ ಪಡೆದದ್ದು ಸಂತಸ ತಂದಿದೆ. ಪುರಸಭೆಯು ರಾಜ್ಯ ಮಟ್ಟದಲ್ಲಿ ಈ ಬಾರಿಯೂ 2ನೇ ಸ್ಥಾನ ಪಡೆದಿದೆ. ಇದಕ್ಕೆ ಪುರಸಭೆ ಆಡಳಿತ ಮಂಡಳಿ ಸದಸ್ಯರ ಸಹಕಾರ, ಸಿಬ್ಬಂದಿ, ಪೌರ ಕಾರ್ಮಿಕರು, ಮುಖ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ವಚ್ಛತೆಯ ಬಗ್ಗೆ ವಹಿಸಿದ ಕ್ರಮ ಹಾಗೂ ನಗರದ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಶುಚಿತ್ವಕ್ಕೆ ನೀಡಿದ ಪ್ರತಿಕ್ರಿಯೆಯಿಂದ ಈ ಸ್ಥಾನ ಲಬಿಸಿದೆ. ನಗರದ ಜನತೆ ಶುಚಿತ್ವ ಕಾಪಾಡಿರುವುದಕ್ಕೆ ಅಭಿನಂದನೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.