ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ
ಮುನವಳ್ಳಿ: ಪಟ್ಟಣದ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರದಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶ್ರೇಷ್ಠ ಗುರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೋಮಶೇಖರ ಮಠದ ಮುರುಘೇಂದ್ರ ಶ್ರೀ ಸಾನ್ನಿಧ್ಯದಲ್ಲಿ ಸೆ.4ರಂದು ವಿದ್ಯಾಲಯದ ಆವರಣದಲ್ಲಿ ಜರುಗುವುದು.
ಎಂ.ಎಸ್.ಕಲಾದಗಿ, ಗುರುನಾಥ ಪತ್ತಾರ, ಗಾಯತ್ರಿ ಹಿರೇಮಠ, ನಾಗೇಶ ಹೊನ್ನಳ್ಳಿ, ಶ್ರೀಮತಿ ಸುಜಾತಾ ಜಂಬಗಿ, ಎ.ವಿ. ನರಗುಂದ, ಮೀನಾಕ್ಷಿ ಮುರನಾಳ ಶ್ರೇಷ್ಠ ಗುರು ಪ್ರಶಸ್ತಿಗೆ ಬಾಜನರಾದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.