ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ‘ಗುರೂಜಿ ಬಂದರು ಗುರುವಾರ’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:14 IST
Last Updated 28 ಡಿಸೆಂಬರ್ 2019, 10:14 IST
ಮಮದಾಪೂರದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಿಂದ ಹಮ್ಮಿಕೊಂಡಿರುವ ‘ಗುರೂಜಿ ಬಂದರು ಗುರುವಾರ’ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಅಶೋಕ ತೋಟಗಿ, ಶಿಕ್ಷಕ ರವಿ ದೇಮಶೆಟ್ಟಿ ಬಿಇಒ ಜಿ.ಬಿ. ಬಳಿಗಾರ ಸಮ್ಮುಖದಲ್ಲಿ ವಿದ್ಯಾರ್ಥಿನಿಗೆ ಮನೆಯ ಬಳಿ ಪಾಠ ಹೇಳಿಕೊಡುತ್ತಿದ್ದಾರೆ
ಮಮದಾಪೂರದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಿಂದ ಹಮ್ಮಿಕೊಂಡಿರುವ ‘ಗುರೂಜಿ ಬಂದರು ಗುರುವಾರ’ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಅಶೋಕ ತೋಟಗಿ, ಶಿಕ್ಷಕ ರವಿ ದೇಮಶೆಟ್ಟಿ ಬಿಇಒ ಜಿ.ಬಿ. ಬಳಿಗಾರ ಸಮ್ಮುಖದಲ್ಲಿ ವಿದ್ಯಾರ್ಥಿನಿಗೆ ಮನೆಯ ಬಳಿ ಪಾಠ ಹೇಳಿಕೊಡುತ್ತಿದ್ದಾರೆ   

ಮಮದಾಪೂರ (ಗೋಕಾಕ): ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಇಲ್ಲಿನ ಚಿಂತಾಮಣಿ ಪಾವಟೆ ಪ್ರೌಢಶಾಲೆಯ ಮುಖ್ಯಶಿಕ್ಷಕ ಹಾಗೂ ಶಿಕ್ಷಕರು ‘ಗುರೂಜಿ ಬಂದರು ಗುರುವಾರ’ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಪ್ರತಿ ಗುರುವಾರ ಶಾಲಾವಧಿ ಬಳಿಕ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಠ ಹೇಳಿಕೊಡುತ್ತಿದ್ದಾರೆ.

ಗೋಕಾಕ ಬಿಇಒ ಜಿ.ಬಿ. ಬಳಗಾರ, ಮುಖ್ಯಶಿಕ್ಷಕ ಅಶೋಕ ತೋಟಗಿ, ಶಿಕ್ಷಕ ರವಿ ದೇಮಶೆಟ್ಟಿ ಗುರುವಾರ ಹಲವು ವಿದ್ಯಾರ್ಥಿಗಳ ಮನೆಗೆ ಬಂದಿದ್ದರು. ಕಠಿಣ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು. ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗಮನಿಸಿ, ಉತ್ತರ ಬರೆಯುವ ವಿಧಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಲಹೆ ನೀಡಿದರು.

‘ಪ್ರತಿ ಗುರುವಾರ ಸಹ ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ಪಾಠ ಹೇಳಿಕೊಡುತ್ತಿದ್ದಾರೆ. ವಾರ್ಷಿಕ ಪರೀಕ್ಷೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಭಯ ಹೋಗಲಾಡಿಸಿ ಪ್ರೇರಣೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇದರೊಂದಿಗೆ ಪರೀಕ್ಷೆಯ ಮಹತ್ವವನ್ನು ಪಾಲಕರಿಗೂ ತಿಳಿಸಿದಂತಾಗುತ್ತದೆ’ ಎಂದು ಅಶೋಕ ತೋಟಗಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.