ADVERTISEMENT

ತೆಲಸಂಗ: ವಿಲಾಸ ಅಧ್ಯಕ್ಷ, ಮೀನಾಕ್ಷಿ ಉಪಾಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 13:01 IST
Last Updated 7 ಜುಲೈ 2021, 13:01 IST
ತೆಲಸಂಗ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಲಾಸ ಮೋರೆ ಹಾಗೂ ಉಪಾಧ್ಯಕ್ಷೆ ಮೀನಾಕ್ಷಿ ಬಾಣಿ ಅವರೊಂದಿಗೆ ಬೆಂಬಲಿಗರು ಸಂಭ್ರಮ ಆಚರಿಸಿದರು
ತೆಲಸಂಗ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಲಾಸ ಮೋರೆ ಹಾಗೂ ಉಪಾಧ್ಯಕ್ಷೆ ಮೀನಾಕ್ಷಿ ಬಾಣಿ ಅವರೊಂದಿಗೆ ಬೆಂಬಲಿಗರು ಸಂಭ್ರಮ ಆಚರಿಸಿದರು   

ತೆಲಸಂಗ (ಬೆಳಗಾವಿ ಜಿಲ್ಲೆ): ಇಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ವಿಲಾಸ ಮೋರೆ ಮತ್ತು ಉಪಾಧ್ಯಕ್ಷೆಯಾಗಿ ಮೀನಾಕ್ಷಿ ಬಾಣಿ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. ಇದರೊಂದಿಗೆ ಮೂರು ತಿಂಗಳಿಂದ ಉಂಟಾಗಿದ್ದ ಕುತೂಹಲಕ್ಕೆ ತೆರೆ ಬಿದ್ದಿತು.

ಅಧ್ಯಕ್ಷ ಸ್ಥಾನಕ್ಕೆ ವಿಲಾಸ ಮೋರೆ ಮತ್ತು ಬಸವರಾಜ ಸಾವಳಗಿ ನಾಮಪತ್ರ ಸಲ್ಲಿಸಿದ್ದರು. 27 ಸದಸ್ಯರ ಪೈಕಿ ಒಬ್ಬರು (ಸುವರ್ಣಾ ದರೂರ) ಗೈರುಹಾಜರಾದರು. ಗುಪ್ತ ಮತದಾನದಲ್ಲಿ ವಿಲಾಸ ಅವರಿಗೆ 13 ಮತ, ಬಸವರಾಜ ಅವರಿಗೆ 11 ಮತ ಬಂದವು. ಎರಡು ಮತಗಳು ತಿರಸ್ಕೃತಗೊಂಡವು.

ಉಪಾಧ್ಯಕ್ಷೆ ಸ್ಥಾನಕ್ಕೆ ಮೀನಾಕ್ಷಿ ಬಾಣಿ ಮತ್ತು ಗಂಗವ್ವ ಶೆಲ್ಲೆಪ್ಪಗೋಳ ನಡುವೆ ಪೈಪೋಟಿ ಕಂಡುಬಂದಿತು. ಮೀನಾಕ್ಷಿ 14 ಮತ ಪಡೆದರೆ, ಗಂಗವ್ವ 11 ಮತಗಳನ್ನು ಗಳಿಸಿದರು. ಒಂದು ಮತ ತಿರಸ್ಕೃತಗೊಂಡಿತು.

ADVERTISEMENT

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗೆದ್ದವರ ಮೆರವಣಿಗೆ ಮಾಡಿದರು.

ಐಗಳಿ ಪೊಲೀಸರು ಭದ್ರತೆ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.