ADVERTISEMENT

ತೆಲಸಂಗ ಹಿರೇಮಠದಲ್ಲಿ ಸರಳ ದಸರಾ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 13:18 IST
Last Updated 16 ಅಕ್ಟೋಬರ್ 2020, 13:18 IST
ತೆಲಸಂಗದ ಹಿರೇಮಠದಲ್ಲಿ ದಸರಾ ಆಚರಣೆ ನಿಮಿತ್ತ ಶುಕ್ರವಾರ ನಡೆದ ಸಭೆಯಲ್ಲಿ ವೀರೇಶ್ವರ ದೇವರು ಮಾತನಾಡಿದರು
ತೆಲಸಂಗದ ಹಿರೇಮಠದಲ್ಲಿ ದಸರಾ ಆಚರಣೆ ನಿಮಿತ್ತ ಶುಕ್ರವಾರ ನಡೆದ ಸಭೆಯಲ್ಲಿ ವೀರೇಶ್ವರ ದೇವರು ಮಾತನಾಡಿದರು   

ತೆಲಸಂಗ: ‘ಮನುಷ್ಯ ಬದುಕಿದ್ದರೆ ಹಣ ಸಂಪಾದಿಸಬಹುದು. ಪ್ರಾಣ ಹೋದರೆ ಮರಳಿ ಪಡೆಯಲಾಗುವುದಿಲ್ಲ. ಕೋವಿಡ್–19 ಕಾರಣದಿಂದ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಆಗಿರುವುದರಿಂದಾಗಿ ಈ ಬಾರಿ ಶ್ರೀಮಠದಲ್ಲಿ ದಸರಾ ಉತ್ಸವ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.

ಇಲ್ಲಿನ ಹಿರೇಮಠದಲ್ಲಿ ದಸರಾ ಆಚರಣೆ ನಿಮಿತ್ತ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘9 ದಿನಗಳ ಪ್ರವಚನ, ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆ ಈ ಬಾರಿ ಇರುವುದಿಲ್ಲ. ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತಗೊಳಿಸಲಾಗಿದೆ’ ಎಂದರು.

ADVERTISEMENT

ಹಿರಿಯರಾದ ಈರಣ್ಣ ಕುಮಠಳ್ಳಿ, ದಾನಪ್ಪ ಹತ್ತಿ, ಅಶೋಕ ಪರುಶೆಟ್ಟಿ, ಸಿದ್ದು ಕೋಡ್ನಿ, ರಾವಸಾಬ ಮೆಣಸಂಗಿ, ಸಿದ್ರಾಯ ಚೊಳ್ಳಿ, ಗುರುರಾಜ ಕುಂಬಾರ, ಚೆನ್ನಪ್ಪ ಕುಮಠಳ್ಳಿ, ದುಂಡಪ್ಪ ಖ್ಯಾಡಿ, ಮಲ್ಲಿಕಾರ್ಜುನ ಹತ್ತಿ, ಡಾ.ಎಸ್.ವೈ. ಇಂಚಗೇರಿ, ಶಿವು ಹತ್ತಿ, ಡಾ.ರಾಜಶೇಖರ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.