ADVERTISEMENT

ಬೆಳಗಾವಿ: ನದಿಯಲ್ಲಿ 3 ಬೈಕ್‌ ಪತ್ತೆ; ಸಾಕ್ಷ್ಯ ನಾಶಕ್ಕೆ ಎಸೆದಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
ಬೆಳಗಾವಿ ಜಿಲ್ಲೆಯ ನಯಾನಗರ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಎಸೆದಿದ್ದ ಬೈಕನ್ನು ಸಾರ್ವಜನಿಕರು ಬುಧವಾರ ಹೊರಕ್ಕೆ ತಂದರು
ಬೆಳಗಾವಿ ಜಿಲ್ಲೆಯ ನಯಾನಗರ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಎಸೆದಿದ್ದ ಬೈಕನ್ನು ಸಾರ್ವಜನಿಕರು ಬುಧವಾರ ಹೊರಕ್ಕೆ ತಂದರು   

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಯಾನಗರ ಸೇತುವೆ ಬಳಿ ಬುಧವಾರ, ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ಗಳು ‍ಪತ್ತೆಯಾಗಿವೆ. 

KA25 G-1459, KA24 J-7907 ನೋಂದಣಿ ಸಂಖ್ಯೆಯ ಎರಡು ಹಾಗೂ ನಂಬರ್‌ ಪ್ಲೇಟ್‌ ಇಲ್ಲದ ಇನ್ನೊಂದು ಬೈಕ್‌ ಪತ್ತೆಯಾಗಿದೆ. ಬೈಲಹೊಂಗಲ ಪೊಲೀಸರು ಅವುಗಳನ್ನು ಹೊರಕ್ಕೆ ತಂದರು.

ಸವದತ್ತಿ ಪಟ್ಟಣದಲ್ಲಿ 2025ರ ಡಿ.22ರಂದು ಮೂರು ಬೈಕುಗಳಲ್ಲಿ ಬಂದಿದ್ದ 9 ಮಂದಿ ಚಿನ್ನದ ಅಂಗಡಿಯಲ್ಲಿ ₹12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಇದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.

ADVERTISEMENT

‘ಬಹುಶಃ ಈ ಮೂರೂ ಬೈಕುಗಳನ್ನೇ ಕೃತ್ಯಕ್ಕೆ ಬಳಸಿ ಸಾಕ್ಷ್ಯ ನಾಶಕ್ಕಾಗಿ ನದಿಯಲ್ಲಿ ಎಸೆದಿರುವ ಶಂಕೆ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಯಾನಗರ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಎಸೆದಿದ್ದ ಬೈಕನ್ನು ಸಾರ್ವಜನಿಕರು ಬುಧವಾರ ಹೊರಕ್ಕೆ ತಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.